Thursday, July 30, 2026

BDA Apartments

Home Front Page ಕ್ರಿಶ್ಚಿಯನ್ ದೇಶಕ್ಕೆ ಹೋಗಿ ಕೈ ಒಡ್ಡುವ ಅವರ ಮಕ್ಕಳು ನಮ್ಮ ಹಳ್ಳಿಗೆ ಬಂದು ಕೆಲಸ ಮಾಡೋಕೆ...

ಕ್ರಿಶ್ಚಿಯನ್ ದೇಶಕ್ಕೆ ಹೋಗಿ ಕೈ ಒಡ್ಡುವ ಅವರ ಮಕ್ಕಳು ನಮ್ಮ ಹಳ್ಳಿಗೆ ಬಂದು ಕೆಲಸ ಮಾಡೋಕೆ ಆಗಲ್ವೆ- ಕಲ್ಲಡ್ಕ ಪ್ರಭಾಕರ್ ವಿರುದ್ದ ಸಂಸದ ಡಿ,ಕೆ ಸುರೇಶ್ ವಾಗ್ದಾಳಿ…

ರಾಮನಗರ,ಜ,16,2020(www.justkannada.in):  ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನಡೆದ ಕನಕಪುರ ಚಲೋದಲ್ಲಿ ತನ್ನ ಮತ್ತು ತನ್ನ ಅಣ್ಣ ಡಿಕೆ ಶಿವಕುಮಾರ್  ಮೇಲೆ ವಾಗ್ದಾಳಿ ನಡೆಸಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ವಿರುದ್ದ ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.

ರಾಮನಗರ ಕನಕಪುರ ತಾಲ್ಲೂಕಿನ ತುಂಗಣಿಯಲ್ಲಿ ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕಲ್ಲಡ್ಕ ಪ್ರಭಾಕರ್  ಭಾರತದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ  ಮಾತನಾಡ್ತಾರೆ. ಆದರೆ  ಅವರ ಮಕ್ಕಳು ಕೆಲಸ ಮಾಡುವುದು ಮಾತ್ರ ಅಮೇರಿಕಾದಲ್ಲಿ.   ಕ್ರಿಶ್ಚಿಯನ್ ದೇಶಕಕ್ಕೆ ಹೋಗಿ ಅವರ ಮಕ್ಕಳು  ಕೈ ಒಡ್ಡುತ್ತಾರೆ. ಯಾಕೆ ನಮ್ಮ ಹಳ್ಳಿಗೆ ಬಂದು ಕೆಲಸ ಮಾಡಲು ಆಗಲ್ಲವೇ..?  ಎಂದು ಲೇವಡಿ ಮಾಡಿದರು.

ಪ್ರಭಾಕರ್ ಇಲ್ಲಿಗೆ ಬಂದು ಭಾಷಣ ಮಾಡುತ್ತಾರೆ. ಅವರಿಗೆ ಹೃದಯಾಘಾತವಾದಾಗ ಯಾವ ಆಸ್ಪತ್ರೆಗೆ ಹೋಗಿದ್ರು. ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿಗೆ ಯಾವುದೇ ಜಾತಿ ಧರ್ಮ ಇಲ್ಲ  ಬರುವುದಿಲ್ಲವೇ ಎಂದು ಸಂಸದ ಡಿ.ಕೆ ಸುರೇಶ್ ಪ್ರಶ್ನಿಸಿದರು.

ಏಸುಪ್ರತಿಮೆ ನಿರ್ಮಾಣ ವಿರೋಧಿಸಿ ಇತ್ತೀಚೆಗೆ ಬಿಜೆಪಿ  ಹಿಂದೂ ಜಾಗರಣ ಸಂಘಟನೆ ವತಿಯಿಂದ ಕನಕಪುರದಲ್ಲಿ ನಡೆದ  ಬೃಹತ್ ಸಮಾವೇಶದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪಾಲ್ಗೊಂಡು ಡಿ.ಕೆ ಬ್ರದರ್ಸ್ ವಿರುದ್ದ ವಾಗ್ದಾಳಿ ನಡೆಸಿದ್ದರು.

Key words: Ramanagar-MP-DK suresh-Outrage-agianst-rss leader-kalladka prabhakar