ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟ: ವಿರಾಟ್, ರೋಹಿತ್​, ಚಹರ್​’ಗೆ ಗೌರವ

ನವದೆಹಲಿ, ಜನವರಿ 1, 2019 (www.justkannada.in): 2019ರ ಐಸಿಸಿ ವರ್ಷದ ಕ್ಯಾಲೆಂಡರ್​ ವರ್ಷದ ಪ್ರಶಸ್ತಿಯನ್ನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್, ಐಸಿಸಿ ಪ್ರಕಟಿಸಿದೆ.

ಐಸಿಸಿ ವಾರ್ಷಿಕ ಪ್ರಶಸ್ತಿಯಲ್ಲಿ ಟೀಮ್ ಇಂಡಿಯಾ ಪಾಲಿಗೆ ಮೂರು ಪ್ರಮುಖ ಪ್ರಶಸ್ತಿಗಳು ಲಭ್ಯವಾಗಿವೆ.

ನಾನಾ ವಿಭಾಗಗಳಲ್ಲಿ ವಿರಾಟ್, ರೋಹಿತ್​, ಚಹರ್​’ ಐಸಿಸಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2019ರ ಏಕದಿನ ವಿಶ್ವಕಪ್​​ ಮ್ಯಾಚ್​ ವಿನ್ನರ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆಯಶಸ್​ ಟೆಸ್ಟ್​ನಲ್ಲಿ ಟೆಸ್ಟ್​ ಕ್ರಿಕೆಟ್​​​ನ ಆಲ್​ ಟೈಮ್​ ಗ್ರೇಟೆಸ್ಟ್​ ಟೆಸ್ಟ್​ ಇನ್ನಿಂಗ್ಸ್​ ಆಡಿರುವ ಬೆನ್​​ ಸ್ಟೋಕ್ಸ್​, ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿಯನ್ನ ತಮ್ಮ ದಾಗಿಸಿಕೊಂಡಿದ್ದಾರೆ.