ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ: ಇಂದು ಕರವೇಯಿಂದ ಅಭಿಯಾನ.

ಬೆಂಗಳೂರು,ಡಿಸೆಂಬರ್,27,2023(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಾಮಫಲಕಗಳಲ್ಲಿ  ಶೇ.60 ರಷ್ಟು ಕನ್ನಡ ಕಡ್ಡಾಯ ಎಂಬ ಅಭಿಯಾನವನ್ನ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದೆ.

ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಕನ್ನಡಕ್ಕೆ  ಶೇ.60ರಷ್ಟು ಆದ್ಯತೆ ಕೊಡಬೇಕು. ಕನ್ನಡ ಬಳಸದ ನಾಮಫಲಕ ತೆರವುಗೊಳಿಸುತ್ತೇವೆ ಎಂದು ಮಾಲ್, ಅಂಗಡಿ ಮಾಲೀಕರಿಗೆ ಕರವೇ ಎಚ್ಚರಿಕೆ ನೀಡಿದೆ.

ಏರ್ ಪೋರ್ಟ್  ನಿಂದ ಯಲಹಂಕ ಶಿವಾಜಿನಗರ, ಎಸ್ಪಿ ರೋಡ್, ಬ್ರಿಗೇಡ್ ರೋಡ್, ಎಂಜಿ ರೋಡ್ ಚಿಕ್ಕಪೇಟೆ ಅವಿನ್ಯೂ ರೋಡ್ ಕಬ್ಬನ್ನ ಪಾರ್ಕ್ ವರೆಗೂ ಕರವೇ ರ್ಯಾಲಿ ಹಮ್ಮಿಕೊಂಡಿದೆ.  ಸಾದಹಳ್ಳಿ ಟೋಲ್ ಸಮೀಪಿ ಪೊಲೀಸ್  ಭದ್ರತೆ ವಹಿಸಲಾಗಿದೆ.  ಓರ್ವ ಎಸಿಪಿ 6 ಇನ್ಸ್ ಪೆಕ್ಟರ್ಸ್,  ಪಿಎಸ್ಐ ಸೇರಿ 500ಕ್ಕೂ ಹೆಚ್ಚು  ಪೊಲೀಸರನ್ನ ನಿಯೋಜನೆ  ಮಾಡಲಾಗಿದೆ.

Key words: Kannada -Mandatory – Nameplates- Kannada organization -campaign.