Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಚಿವ ಸಂಪುಟದಿಂದ ಕೆ.ಎಸ್ ಈಶ್ವರಪ್ಪ ಕಿತ್ತೊಗೆಯಿರಿ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯ…

ಸಚಿವ ಸಂಪುಟದಿಂದ ಕೆ.ಎಸ್ ಈಶ್ವರಪ್ಪ ಕಿತ್ತೊಗೆಯಿರಿ- ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯ…

ಬೆಂಗಳೂರು,ಡಿ,7,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೊಂದು ಡಿಸಿಎಂ ಹುದ್ದೆ ಸೃಷ್ಠಿಸುವ ಕುರಿತು ಕೇಳಿದ ಪ್ರಶ್ನೆಗೆ ವಯಸ್ಸಿಗೆ ಬಂದವರು ಐಶ್ವರ್ಯ ರೈ ಬೇಕಾಂತಾರೆ. ಆದರೆ ಅವರು ಇರೋದು ಒಬ್ಬರೇ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಮಾಜಿ ಸಂಸದ ವಿ,ಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.

ಗೌರವಾನ್ವಿತ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಬಾಯಿಗೆ ಬಂದಂತೆ ಈಶ್ವರಪ್ಪ ಮಾತನಾಡಿದ್ದಾರೆ. ಅವರನ್ನ ಮೊದಲು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ವಿ.ಎಸ್ ಉಗ್ರಪ್ಪ,  ಹೆಣ್ಣನ್ನು 2ನೇ ದರ್ಜೆ ಪ್ರಜೆಯಾಗಿ ನೋಡುವ ಸಂಸ್ಕೃತಿ ಇದೆ. ಕೆ.ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಹೆಣ್ಣುಮಕ್ಕಳಿಗೆ ಮಾಡಿರುವ ಅಪಚಾರ. ಇಂತವರೆಲ್ಲರೂ ಶ್ರೀರಾಮನ ಬಗ್ಗೆ ಹೇಗೆ ಮಾತನಾಡುತ್ತಾರೋ. ಭಾರತದ ಸಂಸ್ಕೃತಿ ಬಗ್ಗೆ ಗೌರವವಿದ್ರೆ ಸಂಪುಟದಿಂದ ಈಶ್ವರಪ್ಪರನ್ನ ಕಿತ್ತೊಗೆಯಿರಿ ಎಂದು ಒತ್ತಾಯಿಸಿದರು.

Key words: Remove- KS Eshwarappa –from-Cabinet-Former MP- VS Ugrappa