ಕನಕದಾಸರ ಜೀವನ ಚರಿತ್ರೆ ಕಡಿತಕ್ಕೆ ಬೇಸರ: ಲೋಪ ಸರಿಪಡಿಸುವಂತೆ ಸಿಎಂ ಬೊಮ್ಮಾಯಿಗೆ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಮನವಿ.

ಬೆಂಗಳೂರು,ಜೂನ್,27,2022(www.justkannada.in):  ಪಠ್ಯಪರಿಷ್ಕರಣೆ ವೇಳೆ ದಾಸಶ್ರೇಷ್ಠ ಭಕ್ತ ಕನಕದಾಸರ ಜೀವನ ಚರಿತ್ರೆ ಕಡಿತಕ್ಕೆ ಬೇಸರ ವ್ಯಕ್ತಪಡಿಸಿರುವ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಅವರು ಲೋಪ ಸರಿಪಡಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

ಇಂದು ಖುದ್ಧಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ ನಿರಂಜನಾನಂದಪುರಿ ಸ್ವಾಮೀಜಿ, ಕನಕದಾಸರ ಬಗ್ಗೆ ಒಂದೇ ಸಾಲಿನಲ್ಲಿ ವಿವರಣೆ ನೀಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕನಕದಾಸರ  ಜೀವನ ಚರಿತ್ರೆ ಕಡಿತ ಮಾಡಲಾಗಿದೆ. ಈ ಮೂಲಕ ದಾಸರ ಆದರ್ಶ, ದಾರ್ಶನಿಕ ಸತ್ಯ ಮರೆಮಾಚುವ ಹುನ್ನಾರ ನಡೆದಿದೆ.   ಇದು ಈ ನೆಲದ ನಾಡುನುಡಿಗೆ ಮಾಡಿದ ಅಪಮಾನ.

ಹೀಗಾಗಿ ಆಗಿರುವ ಲೋಪ ಸರಿಪಡಿಸಿ ಹಿಂದಿನ ಪಠ್ಯದಲ್ಲಿ ಇದ್ದ ಪಾಠವನ್ನ ಅಳವಡಿಸುವಂತೆ ಸಿಎಂಗೆ  ಕಾಗಿನೆಲೆ ನಿರಂಜನನಾಂದಪುರಿ ಸ್ವಾಮೀಜಿ ಮನವಿ ಮಾಡಿದರು.  ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿವರು ಕೂಡಲೇ ಸಂಬಂಧಪಟ್ಟ ಇಲಾಖೆಗೆ ದಾಸಶ್ರೇಷ್ಠ ಕನಕದಾಸರ ಜೀವನ ಚರಿತ್ರೆ ಈ ಹಿಂದೆ ಇದ್ದ ಹಾಗೆ ಪ್ರಕಟಣೆ ಮಾಡಬೇಕು  ಎಂದು ಆದೇಶಿಸಿದರು ಎನ್ನಲಾಗಿದೆ.

Key words: Kanakadasa –life-history-Kaginele Niranjananandpuri Swamiji -appeals – CM Bommai