ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ- ತಾಂಬೂಲ ಪ್ರಶ್ನೆಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್.

ಮಂಗಳೂರು,ಮೇ,28,2022(www.justkannada.in):  ಮಳಲಿ ಮಸೀದಿ ಕುರಿತು ತಾಂಬೂಲ ಪ್ರಶ್ನೆ ವಿರುದ್ಧ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದು ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ. ಮಸೀದಿಯ ಒಂದು ಹಿಡಿ ಮಣ್ಣನ್ನೂ  ಕೊಡಲ್ಲ ಎಂದ್ದಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಎಸ್.ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್. ಮಸೀದಿ ನಿರ್ಮಿಸುವಾಗ ಬಹಣ ಸೂಕ್ಷ್ಮತೆ ಗಮನಿಸಲಾಗುತ್ತದೆ. ಶುದ‍್ಧ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗುತ್ತದೆ. ಈ ದೇಶ ನಮ್ಮದು ದೇಶಕ್ಕಾಗಿ ರಕ್ತ ಹರಿಸಿದ್ದೇವೆ .ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ.  ಸಂಘ ಪರಿವಾರಕ್ಕೆ ತಾಕತ್ ಇದ್ದರೇ ತಾಂಬೂಲ ಪ್ರಶ್ನೆಯನ್ನ ಪ್ರಶ್ನಿಸಲಿ.  ಅಷ್ಟಮಂಗಲಕ್ಕೆ ಒಂದು ಹಿಡಿ ಮಣ್ಣನ್ನೂ ಕೊಡಲ್ಲ. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ ಎಂದರು.

2006ರಲ್ಲಿ ಸಂಡೂರಿನ ಸುಗ್ಗಲಮ್ಮ ದೇಗುಲ ಒಡೆದು ಹಾಕಿದ್ದರಲ್ಲ ಅದನ್ನ ಪ್ರಶ್ನಿಸಲಿ ಎಂದು ಟಾಂಗ್ ನೀಡಿದ ಅಬ್ದುಲ್ ಮಜೀದ್,  ತಾಂಬೂಲ ಪ್ರಶ್ನೆ ಎಂದವರನ್ನ ಒದ್ದು ಒಳಗೆ ಹಾಕಬೇಕು. ಪೂಜಾ ಸ್ಥಳ ಕಾಯ್ದೆ 1991 ರ ಪ್ರಕಾರ ಒಳಗೆ ಹಾಕಬೇಕು ಎಂದರು.

Key words: dargah – dream-SDPI-President- Abdul Majeed

ENGLISH SUMMARY…

It is only a dream that we will part with the dargah: SDPI State President Abdul Majeed
Mangaluru, May 28, 2022 (www.justkannada.in): SDPI President Abdul Majeed has expressed his ire on the Tamboola question concerning the Malali Masjid. “Don’t dream that we will leave the dargah. We won’t part with even one fistful of soil in it,” he said.
Speaking in Mangaluru today, he informed that every minute thing will be checked before constructing a masjid. Masjids will be constructed only in a very pure place. This country is ours, we have shed blood for this country. Don’t dream, we will not part with the dargah. If the Sangh Parivar has the guts let it question the Tamboola issue.
Keywords: SDPI/ President/ Tamboola question