Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೈಸೂರು ದಸರಾದಲ್ಲಿ ‘ಕಂಬಳ’: ಮರು ಚಿಂತನೆಗೆ ಸಂಸದ ಯದುವೀರ್ ಸಲಹೆ

ಮೈಸೂರು ದಸರಾದಲ್ಲಿ ‘ಕಂಬಳ’: ಮರು ಚಿಂತನೆಗೆ ಸಂಸದ ಯದುವೀರ್ ಸಲಹೆ

ಮೈಸೂರು,ಜುಲೈ,2,2026 (www.justkannada.in):  ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಕಂಬಳವನ್ನು ಆಯೋಜಿಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಮಹತ್ವದ ಸಲಹೆಯೊಂದನ್ನ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಯದುವೀರ್, ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಕುರಿತು  ಮರು ಚಿಂತನೆ ನಡೆಸುವಂತೆ ಒತ್ತಾಯಿಸಿದ್ದಾರೆ.ಮೈಸೂರು ದಸರಾದಲ್ಲಿ ‘ಕಂಬಳ’: ಮರು ಚಿಂತನೆಗೆ ಸಂಸದ ಯದುವೀರ್ ಸಲಹೆ kambala

ಮೈಸೂರಿನಲ್ಲಿ ಕಂಬಳ ನಡೆಸಲು ಚರ್ಚೆ ನಡೆಯುತ್ತಿದೆ. ಕಂಬಳ ಕರಾವಳಿ ಭಾಗದ  ಮಣ್ಣು ಸಂಸ್ಕೃತಿಯ ಸಂಕೇತ. ಇದು ಶತಮಾನಗಳ ಇತಿಹಾಸ ಹೊಂದಿದ್ದು, ತನ್ನದೇ ಆದ ಸಂಪ್ರದಾಯ ಧಾರ್ಮಿಕ ಮೌಲ್ಯ ಹೊಂದಿದೆ. ಕಂಬಳ ವಾಣಿಜ್ಯೀಕರಣ ಅಥವಾ ಮನರಂಜನೆ ದೃಷ್ಟಿಕೋನದಿಂದ ನೋಡಿ ಅದರ ಘನತೆ ಕುಗ್ಗಿಸಬಾರದು ಎಂದು ತಿಳಿಸಿದ್ದಾರೆ.ಮೈಸೂರು ದಸರಾದಲ್ಲಿ ‘ಕಂಬಳ’ myore dasara-kambala myore dasara kambala

ನಿರ್ಧಿಷ್ಟ ಪರಿಸರ ಮತ್ತು ಪ್ರಾದೇಶಿಕ ನಂಬಿಕೆಗೆ ಸೀಮಿತವಾಗಿರುವ ವಿಶಿಷ್ಟ ಆಚರಣೆ ಕಂಬಳ. ಅದನ್ನು ಮೂಲ ನೆಲದಿಂದ ಬೇರ್ಪಡಿಸುವುದು ಅದರ  ಆಂತರಿಕ ಪಾವಿತ್ರ್ಯಕ್ಕೆ ಧಕ್ಕೆ ತರುವ ಅಪಾಯ ಹೊಂದಿದೆ. ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.ಮರು ಚಿಂತನೆಗೆ ಸಂಸದ ಯದುವೀರ್ ಸಲಹೆ jk02_new jk02 new

Key words: ‘Kambala, Mysore Dasara,  MP Yaduveer, suggests, rethinking