Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ: ವರದಿ ಪಡೆದು ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ: ವರದಿ ಪಡೆದು ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜುಲೈ,2,2026 (www.justkannada.in):  ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದಲ್ಲಿ ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ: ವರದಿ ಪಡೆದು ಸೂಕ್ತ ಕ್ರಮ ...

ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು  ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

 ವರದಿ ತರಿಸಿಕೊಂಡು ಕ್ರಮ

ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಮಾಗಡಿ ರಸ್ತೆಯಲ್ಲಿ 2 ಕ್ವಾರಿಯಲ್ಲಿ ದುರಂತ ಸಂಭವಿಸಿದೆ. ಬಂಡೆ ಕುಸಿತವಾಗಿ 7 ಕಾರ್ಮಿಕರು ಮೃತಪಟ್ಟಿದ್ದಾರೆಂದು ಮಾಹಿತಿ ಬಂದಿದೆ.  ಮೃತದೇಹಗಳು ಸಿಕ್ಕಿವೆ.   ಸ್ಥಳಕ್ಕೆ ಅಧಿಕಾರಿಗಳೂ ಭೇಟಿ  ನೀಡಿದ್ದಾರೆ. ಅಲ್ಲಿ ಸ್ಪೋಟ ಆಗಿಲ್ಲ ಎಂದು ಗೊತ್ತಾಗಿದೆ ಮಧ್ಯಾಹ್ನ  ವರದಿ ತರಿಸಿಕೊಳ್ಳುವೆ. ಕ್ವಾರಿ ಲೀಗಲ್ ಅಥವಾ ಅಕ್ರಮವಾಗಿ ನಡೆಸುತ್ತಿದ್ದಾರಾ ಅಂತಾ ಗೊತ್ತಾಗಬೇಕು. ನಿಯಮ ಪಾಲಿಸಬೇಕಾಗಿದೆ ಯಶವಂತಪುರ ಶಾಸಕರು ಮಾಹಿತಿ ನೀಡಿದ್ದಾರೆ.  ರಿಪೋರ್ಟ್ ತರಿಸಿಕೊಂಡು ನಾನು ಕ್ರಮ ತೆಗದುಕೊಳ್ಳುತ್ತೇನೆ  ಎಂದು ಹೇಳಿದರು.ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ jk02_new jk02 new

Key words: Condolences, Workers, died, quarry, action, CM, DK Shivakumar