Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಹರಾಜು ಬಳಿಕ ಗಣಿಗಾರಿಕೆಗೆ ಆರಂಭಕ್ಕೆ ಅವಧಿ ನಿಗದಿ: ವೈಜ್ಞಾನಿಕ ನಿಯಮ ರೂಪಿಸಿ- ಸಿಎಂ ಡಿಕೆ ಶಿವಕುಮಾರ್

ಹರಾಜು ಬಳಿಕ ಗಣಿಗಾರಿಕೆಗೆ ಆರಂಭಕ್ಕೆ ಅವಧಿ ನಿಗದಿ: ವೈಜ್ಞಾನಿಕ ನಿಯಮ ರೂಪಿಸಿ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಜುಲೈ,1,2026 (www.justkannada.in): ಹರಾಜಿನ ಮೂಲಕ ಜಾಗ ಪಡೆದು ವರ್ಷಗಟ್ಟಲೆ ಗಣಿಗಾರಿಕೆ ಆರಂಭಿಸದೆ ಜಾಗ ಇಟ್ಟುಕೊಂಡು ಕುಳಿತವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟ ಸೂಚನೆಗಳನ್ನು ನೀಡಿದರು.

ರಾಜ್ಯದಲ್ಲಿ ಗಣಿಗಾರಿಕೆಗೆ ಭೂಮಿ ಪಡೆದವರು ಎಷ್ಟು ಮಂದಿ ಇದ್ದಾರೆ ? ಲೀಸ್‌ ಪಡೆದ ಪ್ರಕರಣಗಳ ಸ್ಥಿತಿ ಗತಿ ಏನಿದೆ? ಗಣಿಗಾರಿಕೆ ಆರಂಭಿಸದಿರುವವರ ಪಟ್ಟಿ, ಅದಕ್ಕೆ ಕಾರಣಗಳೇನು, ಅರಣ್ಯ ಅನುಮತಿ ಬಾಕಿ ಇರುವ ಪ್ರಕರಣಗಳೆಷ್ಟು, ಬಾಕಿ ಉಳಿಯಲು ಕಾರಣಗಳೇನು ಎನ್ನುವುದೂ ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಗಣಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂದೂರಿ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದರು.ಹರಾಜು ಬಳಿಕ ಗಣಿಗಾರಿಕೆಗೆ ಆರಂಭಕ್ಕೆ ಅವಧಿ ನಿಗದಿ: ವೈಜ್ಞಾನಿಕ ನಿಯಮ ರೂಪಿಸಿ...

ರಾಜ್ಯದ ಗಣಿ ನೀತಿ ಮತ್ತು ಇತರೆ ರಾಜ್ಯಗಳಲ್ಲಿ ಇರುವ ಗಣಿ ನೀತಿ, ನಿಯಮ ಮತ್ತು ಕಾನೂನುಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ, “ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್‌.ಕೆ.ಅತೀಕ್‌ ಮತ್ತು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಜವಾಬ್ದಾರಿ ವಹಿಸಿದರು.ಹರಾಜು ಬಳಿಕ ಗಣಿಗಾರಿಕೆಗೆ ಆರಂಭಕ್ಕೆ ಅವಧಿ ನಿಗದಿ dks dks 7

ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, 2025-26ನೇ ಸಾಲಿನಲ್ಲಿ 8,845.39 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ನಿಗದಿತ ಗುರಿಯ ಶೇ. 98 ಸಾಧಿಸಲಾಗಿದೆ. 2026-27ನೇ ಸಾಲಿನಲ್ಲಿ ಇದುವರೆಗೆ ೧,೧೬೪.೧೧ ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. 2025-26ನೇ ಸಾಲಿನಲ್ಲಿ ಅಕ್ರಮ ಮತ್ತು ನಿಯಮಬಾಹಿರ ಗಣಿಗಾರಿಕೆ ನಡೆಸಿದ 6301 ಪ್ರಕರಣಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. 3126 ಲಕ್ಷ ದಂಡ ಸಂಗ್ರಹಿಸಿ, 268 ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ 3648 ಮರಳು ಗಣಿಗಾರಿಕೆ ಪ್ರಕರಣಗಳೂ ಸೇರಿವೆ ಎಂದು ವರದಿ ಒಪ್ಪಿಸಿದರು.ವೈಜ್ಞಾನಿಕ ನಿಯಮ ರೂಪಿಸಿ dks dks 1

ಹಿಂದಿನ ಅವಧಿಗೆ ಅನ್ವಯವಾಗುವ ತೆರಿಗೆಯಿಂದ ಆದಾಯದ ಮೇಲಿನ ಪರಿಣಾಮಗಳು

ಹಿಂದಿನ ಅವಧಿಗೆ ಅಥವಾ ಪೂರ್ವಾನ್ವಯವಾಗುವ ತೆರಿಗೆಯಿಂದ ಸರ್ಕಾರಕ್ಕೆ ಬರಬೇಕಾದ ಆದಾಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ  ಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಗಣಿ ನಿಯಮಗಳು ಮತ್ತು ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಮೀರದಂತೆ ಕ್ರಮ ವಹಿಸುವಂತೆ ಸೂಚಿಸಿ ಈ ಕೆಳಗಿನ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.ಸಿಎಂ ಡಿಕೆ ಶಿವಕುಮಾರ್ jk02_new jk02 new

ಪೂರ್ವಾನ್ವಯವಾದರೆ ಆದಾಯದ ಪರಿಣಾಮಗಳು

ಹಿಂದಿನ ದಿನಾಂಕದಿಂದ ಜಾರಿಗೆ ಬಂದಲ್ಲಿ ಉಂಟಾಗುವ ಆದಾಯದ ಪರಿಣಾಮಗಳು

ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ ಉಂಟಾಗುವ ಕಂದಾಯದ ಪರಿಣಾಮಗಳು.

ಈ ಪ್ರಸ್ತಾವನೆಯು ಪೂರ್ವಾನ್ವಯವಾಗಿ ಜಾರಿಯಾದರೆ ಸರ್ಕಾರದ ಆದಾಯದ ಮೇಲೆ  ಯಾವ ರೀತಿಯ ಪರಿಣಾಮ ಬೀರುತ್ತದೆ.

ಪೂರ್ವಾನ್ವಯ ಆದಾಯದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿ.

ಹಿಂದಿನ ಅವಧಿಗೆ ಅನ್ವಯವಾಗುವ ಕಂದಾಯದ ಪರಿಣಾಮಗಳನ್ನು ಪರಿಶೀಲಿಸಿ.

Key words: mining, after, auction, Formulate, scientific rule, CM, DK Shivakumar