ಮೈಸೂರು,ಆಗಸ್ಟ್,7,2026 (www.justkannada.in): ಕಬಿನಿ ಜಲಾಶಯಕ್ಕೆ ಕಲುಷಿತ, ತ್ಯಾಜ್ಯ ಬಿಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್ಐ ಆರ್ ದಾಖಲಾಗಿದೆ.
ಕಬಿನಿ ಡ್ಯಾಂಗೆ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬಿನಿ ಜಲಾಶಯದ ಎಇಇ ಗಣೇಶ್ ಅವರು ಪ್ರಕರಣ ದಾಖಲಿಸಿದ್ದು ಕಿಡಿಗೇಡಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕಬಿನಿ ಹಿನ್ನೀರಿನ ಗಣೇಶನಗುಡಿ ಗ್ರಾಮದ ಬಳಿ ತ್ಯಾಜ್ಯ ಸುರಿಯಲಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿತ್ತು. ರೆಸಾರ್ಟ್ ಗಳ , ಹೋಂ ಸ್ಟೇಗಳ ಫಿಟ್ ಗುಂಡಿಯ ಮಲ ಸುರಿದಿರುವುದಾಗಿ ದೂರು ನೀಡಲಾಗಿದೆ.
ತಡವಾಗಿ ವಿಷಯ ತಿಳಿದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಳಿಕ ಅಂತರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯಾರೋ ಕಿಡಿಗೇಡಿಗಳು ಅನಾರೋಗ್ಯ ಉಂಟುಮಾಡುವ ಉದ್ದೇಶ ಹೊಂದಿದ್ದಾರೆ. ತ್ಯಾಜ್ಯ ಸುರಿದು ಆರೋಗ್ಯ ಹದಗೆಡುವಂತೆ ಮಾಡುತ್ತಿದ್ದಾರೆ ತ್ಯಾಜ್ಯದ ನೀರು ಕಬಿನಿಗೆ ಸೇರಿ ನೀರು ಕಲುಷಿತಗೊಂಡಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Key words: Kabini Dam, pollution, case, FIR, registered







