Tuesday, August 4, 2026

BDA Apartments

Home Front Page ವರುಣಾ, ಅರಸೀಕೆರೆ ಕ್ಷೇತ್ರಗಳ ಅಭ್ಯರ್ಥಿಗಳ ದಿಢೀರ್ ಬದಲಾವಣೆ ಮಾಡಿದ ಜೆಡಿಎಸ್!

ವರುಣಾ, ಅರಸೀಕೆರೆ ಕ್ಷೇತ್ರಗಳ ಅಭ್ಯರ್ಥಿಗಳ ದಿಢೀರ್ ಬದಲಾವಣೆ ಮಾಡಿದ ಜೆಡಿಎಸ್!

ಮೈಸೂರು, ಏಪ್ರಿಲ್ 16, 2023 (www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುತ್ತಿರುವ ವರುಣಾ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಜೆಡಿಎಸ್ ನಾಯಕರು ಬದಲಾವಣೆ ಮಾಡಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದ ಜೆಡಿಎಸ್ ನಾಯಕರು, ಅಭಿಷೇಕ್ ಅವರಿಗೆ ಅವಕಾಶ ನೀಡಿದ್ದರು.

ಆದರೀಗ  ಇದೀಗ ಮಾಜಿ ಶಾಸಕ ಭಾರತಿ ಶಂಕರ್ ಅವರಿಗೆ ವರುಣಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಲಾಗಿದೆ.

ಅರಸಿಕೆರೆ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲಾಗಿದ್ದು, ಅಶೋಕ್ ಬದಲಿಗೆ ಯಡಿಯೂರಪ್ಪನವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಸಂತೋಷ್ ಇಂದು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.