Sunday, September 20, 2026

BDA Apartments

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟು ಕೋಟಿ ಒಡೆಯ ಗೊತ್ತಾ? ಇಲ್ಲಿದೆ ಆಸ್ತಿ...
Home Front Page ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟು ಕೋಟಿ ಒಡೆಯ ಗೊತ್ತಾ? ಇಲ್ಲಿದೆ ಆಸ್ತಿ ವಿವರ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಷ್ಟು ಕೋಟಿ ಒಡೆಯ ಗೊತ್ತಾ? ಇಲ್ಲಿದೆ ಆಸ್ತಿ ವಿವರ…

ಬೆಂಗಳೂರು, ಏಪ್ರಿಲ್ 16, 2023 (www.justkannada.in): ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ 49.70 ಕೋಟಿ ಆಸ್ತಿ ಹೊಂದಿರುವ ಕುರಿತು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

5.98 ಕೋಟಿ ಚರ ಆಸ್ತಿಯನ್ನು ಹೊಂದಿದ್ದು, ಹಿಂದೂ ಅವಿಭಜಿತ ಕುಟುಂಬದಿಂದ 1.57 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಅವರ ಪತ್ನಿ ಚನ್ನಮ್ಮ 1.14 ಕೋಟಿ ಹಾಗೂ ಪುತ್ರಿ ಅದಿತಿ 1.12 ಕೋಟಿ ಹೂಡಿಕೆ ಮಾಡಿದ್ದಾರೆ.

ಅವರ ಪುತ್ರ ಭರತ್ ಗೆ 14.74 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ಬೊಮ್ಮಾಯಿ ಅವರಿಗೆ 42.15 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ, ಇದರಲ್ಲಿ ಹಿಂದೂ ಅವಿಭಜಿತ ಕುಟುಂಬದ 19.2 ಕೋಟಿ ರೂ. ಸೇರಿದೆ. ಬೊಮ್ಮಾಯಿ ಅವರಿಗೆ 5.79 ಕೋಟಿ ರೂ. ಸಾಲ ಇದೆ.