Sunday, September 20, 2026

BDA Apartments

ರಾಜಸ್ಥಾನದ ʻನಂದಿನಿ ಗುಪ್ತಾಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ BDA JK_Adv BDA...
Home Cinema ರಾಜಸ್ಥಾನದ ʻನಂದಿನಿ ಗುಪ್ತಾಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ

ರಾಜಸ್ಥಾನದ ʻನಂದಿನಿ ಗುಪ್ತಾಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ

ಬೆಂಗಳೂರು, ಏಪ್ರಿಲ್ 16, 2023 (www.justkannada.in): ರಾಜಸ್ಥಾನದ ʻನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2023  ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆದರು, ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2 ನೇ ರನ್ನರ್ ಅಪ್ ಕಿರೀಟವನ್ನು ಪಡೆದಿದ್ದಾರೆ.

ಭಾರತದ ಅಗ್ರಗಣ್ಯ ಪ್ರತಿಷ್ಠಿತ ಸ್ಪರ್ಧೆಯ 59 ನೇ ಆವೃತ್ತಿಯ ಫೈನಲ್ಸ್ ಮಣಿಪುರದ ಇಂಫಾಲ್‌ನ ಖುಮಾನ್ ಲಂಪಾಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಮಾಜಿ ಫೆಮಿನಾ ಮಿಸ್ ಇಂಡಿಯಾ 2022 ವಿಜೇತ ಕರ್ನಾಟಕದ ಸಿನಿ ಶೆಟ್ಟಿ ಅವರು ಈಗ ಮಿಸ್ ವರ್ಲ್ಡ್ 2024 ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.