Wednesday, September 9, 2026

BDA Apartments

Home Front Page ಇಂದು RCB vs GT ಪಂದ್ಯ: ಬಿಗಿ ಬಂದೋಬಸ್ತ್ ಗೆ 2300 ಪೊಲೀಸರ ನಿಯೋಜನೆ

ಇಂದು RCB vs GT ಪಂದ್ಯ: ಬಿಗಿ ಬಂದೋಬಸ್ತ್ ಗೆ 2300 ಪೊಲೀಸರ ನಿಯೋಜನೆ

ಬೆಂಗಳೂರು,ಏಪ್ರಿಲ್,24,2026 (www.justkannada.in): ರಾಜ್ಯದಲ್ಲಿ ಬಿಸಿಲಿನ ತಾಪದ ಜೊತೆಗೆ ಐಪಿಎಲ್ ಹವಾ ಕೂಡ ಹೆಚ್ಚಾಗಿದ್ದು ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿಬಿ ಮತ್ತು ಜಿಟಿ ಮುಖಾಮುಖಿಯಾಗಲಿವೆ.

ಇಂದು ಆರ್ ಸಿಬಿ ಪಂದ್ಯ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ  ಬಿಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ. ಬಂದೋಬಸ್ತ್ ಗಾಗಿ ಸುಮಾರು 2300 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ನೋ ಪಾರ್ಕಿಂಗ್ ರಸ್ತೆಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದು,  ಮೊಬೈಲ್ ಕಳ್ಳತನದ ಬಗ್ಗೆಯೂ ಪೊಲೀಸರು ನಿಗಾ ವಹಿಸಲಿದ್ದಾರೆ.

ಕಳೆದ ಬಾರಿ 100ಕ್ಕೂ ಹೆಚ್ಚು ಟಿಕೆಟ್ ಗಳು ಅಕ್ರಮ ಮಾರಾಟವಾದ  ಹಿನ್ನೆಲೆಯಲ್ಲಿ ಕಾಳಸಂತೆಯಲ್ಲಿ ಟಿಕೆಟ್ ಮಾರುವವರ ಮೇಲೆ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ  ನಡೆಸಲಿದ್ದು  ಇನ್ನುಳಿದಂತೆ ಜನಜಂಗುಳಿ ಸೇರದಂತೆ ಪೊಲೀಸರ ಭದ್ರತೆ ವಹಿಸಲಿದ್ದಾರೆ.

Key words: IPL, RCB vs GT, match, tight security, Bangalore