ಶಿವಮೊಗ್ಗ,ಏಪ್ರಿಲ್,24,2026 (www.justkannada.in): ಜೋಕಾಲಿಯಲ್ಲಿ ಆಡುತ್ತಿದ್ದಾಗ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಲಕ್ಕಿನಕೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗದ ವಿದ್ಯಾನಗರದ 9 ವರ್ಷದ ಪ್ರಣಮ್ಯ ಮೃತಪಟ್ಟ ಬಾಲಕಿ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿದ್ದ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಈ ಮಧ್ಯೆ ಪಂಚೆಯಲ್ಲಿ ಜೋಕಾಲಿ ಮಾಡಿಕೊಂಡು ಆಡುತ್ತಿದ್ದ ವೇಳೆ ಕುಣಿಕೆ ಬಿಗಿದು ಪ್ರಣಮ್ಯ ಮೃತಪಟ್ಟಿದ್ದಾಳೆ.
ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: 9-year-old girl, dies, caught, playing







