Thursday, October 15, 2026

Dasara Wishes

Happy Dasara
Home Crime ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: 160 ಮಂದಿ ಬಂಧನ: 62 ಲಕ್ಷ ರೂ. ಹಣ ಜಪ್ತಿ.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: 160 ಮಂದಿ ಬಂಧನ: 62 ಲಕ್ಷ ರೂ. ಹಣ ಜಪ್ತಿ.

ಬೆಂಗಳೂರು,ಏಪ್ರಿಲ್,25,2023(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಬೆಟ್ಟಿಂಗ್  ದಂಧೆಯಲ್ಲಿ ತೊಡಗಿದ್ದ 160 ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ  35 ಪ್ರಕರಣ ದಾಖಲಾಗಿದ್ದು, ಪೊಲೀಸರು 160 ಮಂದಿಯನ್ನ ಬಂಧಿಸಿ 62 ಲಕ್ಷ ರೂ. ಹಣ ಜಪ್ತಿ  ಮಾಡಿದ್ದಾರೆ. ಆನ್ ಲೈನ್ ಮತ್ತು ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಬೇರ ಬೇರೆ ಆ್ಯಪ್ ಗಳನ್ನ ಇಟ್ಟುಕೊಂಡು ಬಾಲ್ ಟು ಬಾಲ್ ಬೆಟ್ಟಿಂಗ್ ಕಟ್ಟುವ ಮೂಲಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: 160 ಮಂದಿ ಬಂಧನ: 62 ಲಕ್ಷ ರೂ. ಹಣ ಜಪ್ತಿ ipl

ಈ ಬಗ್ಗೆ ನಿಗಾವಹಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು  ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದವರನ್ನ ಬಂಧಿಸಿದ್ದಾರೆ.  ಈ ಸಂಬಂಧ ನಗರದ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.  ಸದ್ಯ ಇನ್ನೂ ಹಲವು ಗ್ಯಾಂಬ್ಲರ್ ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.

Key words:  IPL-cricket- betting- 160 people –arrested-bangalore