ಕಾಂಗ್ರೆಸ್ ಜಾತಿವಾಗಿ ರಾಜಕಾರಣ ತಿರಸ್ಕರಿಸಿ ರಾಷ್ಟ್ರೀಯವಾದಿ ಬಿಜೆಪಿ ಬೆಂಬಲಿಸಿ- ಕೆ.ಎಸ್ ಈಶ್ವರಪ್ಪ ಮನವಿ.

ಬಾಗಲಕೋಟೆ,ಏಪ್ರಿಲ್,26,2023(www.justkannada.in): ಕಾಂಗ್ರೆಸ್ ಜಾತಿವಾಗಿ ರಾಜಕಾರಣ ತಿರಸ್ಕರಿಸಿ ರಾಷ್ಟ್ರೀಯವಾದಿ ಬಿಜೆಪಿ ಬೆಂಬಲಿಸಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದರು.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ದೇಶ ಮತ್ತು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಬಿಜೆಪಿ ಮಾಡಿದೆ. ಆದರೆ ಕಾಂಗ್ರೆಸ್ ತದ್ವಿರುದ್ದ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ಸಂಪೂರ್ಣ ಜಾತಿವಾದಿ. ಕಾಂಗ್ರೆಸ್ ಜಾತಿವಾದಿ ರಾಜಕಾರಣ ತಿರಸ್ಕರಿಸಿ ರಾಷ್ಟ್ರೀಯವಾದಿ ಬಿಜೆಪಿ ಬೆಂಬಲಿಸಿ ಎಂದರು.

ಸಿದ್ಧರಾಮಯ್ಯ ಸೋತರೂ ನೆಲ ಕಚ್ಚಿದರೂ ಬುದ್ದಿ ಬಂದಿಲ್ಲ. ಕಾಂಗ್ರೆಸ್ ಲಿಂಗಾಯತರಲ್ಲಿ ಒಡೆಕು ತಂದರು.  ಬಸವಣ್ಣನವರಿಗೂ ಕಳಂಕ ತಂದರು. ಹೀಗಾಗಿ ಕಾಂಗ್ರೆಸ್ ನವರನ್ನ ಬಿಡುವ ಪ್ರಶ್ನೆಯೇ ಇಲ್ಲ.   ಈಗ ಇಡೀ ಹಿಂದೂ ಸಮುದಾಯ ಒಂದಾಗಿದೆ.  ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದರು.

Key words: Reject- politics – Congress – support – BJP – KS Eshwarappa