Saturday, August 29, 2026

BDA Apartments

Home Front Page ಡಬಲ್‌ ಇಂಜಿನ್ ಸರ್ಕಾರದಿಂದ ದ್ರೋಹ: ಮೀಸಲಾತಿ ಬಗ್ಗೆ ಏಕೆ ಮೋಸದಾಟ ಆಡಿದಿರಿ ?  ರಣದೀಪ್ ಸಿಂಗ್...

ಡಬಲ್‌ ಇಂಜಿನ್ ಸರ್ಕಾರದಿಂದ ದ್ರೋಹ: ಮೀಸಲಾತಿ ಬಗ್ಗೆ ಏಕೆ ಮೋಸದಾಟ ಆಡಿದಿರಿ ?  ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ.

ಮೈಸೂರು,ಏಪ್ರಿಲ್,26,2023(www.justkannada.in): ಮೀಸಲಾತಿ ವಿಚಾರವಾಗಿ ಬಿಜೆಪಿ ಮೋಸದಾಟ ಬಯಲಾಗಿದೆ. ಇದು ಡಬಲ್‌ ಇಂಜಿನ್ ಸರ್ಕಾರ ಮಾಡಿದ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಸದಾ ಹೇಳುತಿತ್ತು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಮೀಸಲಾತಿ ವಿಚಾರ ಒಕ್ಕಲಿಗ ಲಿಂಗಾಯತ ಸಮುದಾಯಕ್ಕೆ ಲಾಲಿಪಾಪ್ ಕೊಟ್ಟಂತೆ ಆಗಿದೆ. ಚುನಾವಣೆವರೆಗೂ ಈ ರೀತಿ ಸುಳ್ಳು ಭರವಸೆ ಕೊಡುವುದಾಗಿತ್ತು. ಇದು ಸುಪ್ರೀಂಕೋರ್ಟ್‌ ನಲ್ಲಿ ಬಯಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಶೇ.2ರಷ್ಟು ಲಿಂಗಾಯತ ಮೀಸಲಾತಿ ರದ್ದಾಗಲಿದೆ. ಒಕ್ಕಲಿಗರ 2C ಮತ್ತೆ 3Aಗೆ ಹೋಗಲಿದೆ. ಒಕ್ಕಲಿಗರ 2% ಹೆಚ್ಚುವರಿ ರದ್ದಾಗಲಿದೆ. ಅಂತಿಮವಾಗಿ ಯಾರಿಗೂ ಮೀಸಲಾತಿ ಸಿಗುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಏಕೆ ಮೋಸದಾಟ ಆಡಿದಿರಿ ? ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥನೆ ಮಾಡಿಕೊಳ್ಳಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅಫಿಡೆವಿಟ್ ಹಾಕಲು ಏಕೆ ಸಾಧ್ಯವಾಗಲಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದರು.

Key words: Double Engine- Govt-cheat –reservation-Randeep Singh Surjewala