Thursday, October 15, 2026

Dasara Wishes

Happy Dasara
Home Front Page ರೈತರ ಹಿತ ಕಾಯಲು ಸರ್ಕಾರ ಬದ್ಧ- ಪ್ರತಿಭಟನೆ ಕೈಬಿಡಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮನವಿ

ರೈತರ ಹಿತ ಕಾಯಲು ಸರ್ಕಾರ ಬದ್ಧ- ಪ್ರತಿಭಟನೆ ಕೈಬಿಡಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮನವಿ

ಹುಬ್ಬಳ್ಳಿ,ಅಕ್ಟೋಬರ್15,2026 (): ಕಬ್ಬಿಗೆ ನ್ಯಾಯಯುತ ದರ (ಎಫ್​ಆರ್​ಪಿ) ನಿಗದಿ ಹಾಗೂ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಆಗ್ರಹಿಸಿ  ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಸ್ತೆಯಲ್ಲಿ ಕೂತು ಪ್ರತಿಭಟನೆ ನಡೆಸಸುವ ಅವಶ್ಯಕತೆ ಇಲ್ಲ.  ನಿಮ್ಮ ಹಿತ  ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿದರು.MSP joshi

ಹುಬ್ಬಳ್ಳಿಯಲ್ಲಿ ಬೆಳಗಾವಿ ಜಿಲ್ಲೆ, ಮಂಡ್ಯ ಹಾವೇರಿ, ಕೊಪ್ಪಳ, ಧಾರವಾಡದಲ್ಲೂ ರೈತರು ಪ್ರತಿಭಟನೆ ನಡೆಸಿ ಎಫ್​ಆರ್​ಪಿ, ಎಂಎಸ್‌ ಪಿ ದರ ನಿಗದಿಗೆ ಆಗ್ರಹಿಸಿದ್ದರು.

 

English Summary
Title

Government committed to safeguarding farmers' interests – Union Minister Pralhad Joshi urges withdrawal of protest

Short Description
In light of protests by sugarcane farmers across the state—who are demanding the fixation of a Fair and Remunerative Price (FRP) for sugarcane and a Minimum Support Price (MSP) for sugar—Union Minister Pralhad Joshi has appealed to them to call off their agitation. Speaking on the matter, Union Minister Pralhad Joshi stated that there is no need to stage protests by sitting on the roads. He urged the farmers to withdraw their protest, assuring them that the government is committed to safeguarding their interests.
Keywords
MSP, FRP, Sugarcane, Government, protecting, farmers, Union Minister, Pralhad Joshi