ಬೆಂಗಳೂರು,ಅಕ್ಟೋಬರ್,15,2026 (www.justkannada.in) ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿರುವ ‘ಸ್ಟಿಂಗ್ ಆಪರೇಷನ್’ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮನ್ನು ಬಂಧಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ , ಸಂಶಯ ಬಂದರೆ ನನ್ನನು ವಶಕ್ಕೆ ಪಡೆಯುವುದಾಗಿ ಹೇಳಿದ್ದೀರಿ ನನ್ನನ್ನು ಮುಟ್ಟಿ ನೋಡಿ. ತಾಕತ್, ಯೋಗ್ಯತೆ ಇದ್ದರೇ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ಸವಾಲೆಸೆದರು.
ಶೇಷಾದ್ರಿಪುರಂ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಂಶಯ ಬಂದ್ರೆ ನನ್ನನ್ನು ಅರೆಸ್ಟ್ ಮಾಡಿಸ್ತೀವಿ ಅಂತಾರೆ ಬಾರಪ್ಪ ಅರೆಸ್ಟ್ ಮಾಡಿಸಿ ನಾನು ನೋಡುತ್ತೇನೆ. ನನ್ನನ್ನ ಅರೆಸ್ಟ್ ಮಾಡಿದ್ರೆ ಕರ್ನಾಟಕ ಏನಾಗುತ್ತೇ ನೋಡುತ್ತೇನೆ. . ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸ್ಟಿಂಗ್ ನಡೆದಿದೆ. ಸಿದ್ದರಾಮಯ್ಯಗೆ ಗೊತ್ತಿದ್ದ ವಿಷಯವೇ ಇದು. ನನ್ನ ಹೋರಾಟ ಶುರು ತಯಾರಿದ್ದೀನಿ ನಾನು ಈಗ್ಲೇ ಕಮಿಷನರ್ ಕಚೇರಿಗೆ ಬರುತ್ತೀನಿ ಟಚ್ ಮಾಡಿ. ರೆಡಿ ಇದ್ದೀನಿ ಬನ್ನಿ ಅಖಾಡಕ್ಕೆ ಎಂದು ವಾಗ್ದಾಳಿ ನಡೆಸಿದರು.











