Thursday, October 15, 2026

Dasara Wishes

ಮತ್ತೊಂದು ಬಹುಕೋಟಿ ವಂಚನೆ ಬಯಲು: ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚಕರು ಪರಾರಿ...
Happy Dasara
Home Front Page ಕಾಡಾನೆ ದಾಳಿಯಿಂದ ಬೋರ್‌ ವೆಲ್‌ ಹಾನಿ: ಪರಿಹಾರದ ನಿರೀಕ್ಷೆಯಲ್ಲಿ ರೈತ

ಕಾಡಾನೆ ದಾಳಿಯಿಂದ ಬೋರ್‌ ವೆಲ್‌ ಹಾನಿ: ಪರಿಹಾರದ ನಿರೀಕ್ಷೆಯಲ್ಲಿ ರೈತ

ಮೈಸೂರು,ಅಕ್ಟೋಬರ್‌,15,2026 (www.justkannada.in): ಕಾಡಾನೆ ದಾಳಿಯಿಂದಾಗಿ ರೈತರೊಬ್ಬರ ಜಮೀನಿನ ಬೋರ್‌ ವೆಲ್‌ ಹಾನಿಯಾಗಿದ್ದು ಸೂಕ್ತ ಪರಿಹಾರಕ್ಕೆ ರೈತ ಮನವಿ ಮಾಡಿದ್ದಾರೆ.

ಗುಜ್ಜೇಗೌಡನಪುರದಲ್ಲಿ ರೈತ ಶಂಭಯ್ಯ ಅವರ ಜಮೀನಿನಲ್ಲಿದ್ದ ಬೋರ್‌ ವೆಲ್‌ ಕಾಡಾನೆ ದಾಳಯಿಂದ ಹಾನಿಗೊಳಗಾಗಿದೆ.  ಉಂಟಾಗಿರುವ ಹಾನಿ ಕೇವಲ ಒಬ್ಬ ರೈತನ ಸಮಸ್ಯೆಯಲ್ಲ; ಅರಣ್ಯದಂಚಿನ ಗ್ರಾಮಗಳಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಆತಂಕಕ್ಕೆ ಕನ್ನಡಿ ಹಿಡಿದಿದೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಸಹಜವಾದರೂ, ಅವುಗಳಿಂದ ಕೃಷಿ ಚಟುವಟಿಕೆಗಳಿಗೆ ಪದೇಪದೇ ಹಾನಿಯಾಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳು ಅಗತ್ಯ. ಕಾಡಾನೆಗಳ ಚಲನವಲನದ ಮೇಲೆ ನಿಗಾ, ರೈತರಿಗೆ ಮುನ್ನೆಚ್ಚರಿಕೆ, ಬೆಳೆ ಮತ್ತು ಕೃಷಿ ಉಪಕರಣಗಳ ರಕ್ಷಣೆ ಹಾಗೂ ಹಾನಿಗೊಳಗಾದವರಿಗೆ ತ್ವರಿತ ಪರಿಹಾರ ಒದಗಿಸುವುದು ಅರಣ್ಯ ಇಲಾಖೆಯ ಆದ್ಯತೆಯಾಗಬೇಕಿದೆ.Bore well farmer borwell

ಶಾಸಕ ಜಿ.ಟಿ.ದೇವೇಗೌಡ ಹಾಗೂ ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಗುಜ್ಜೇಗೌಡನಪುರದ ಕಾಡಾನೆ ಹಾವಳಿಗೆ ಪರಿಹಾರ ಕಂಡುಕೊಳ್ಳುತ್ತಾರೆಯೇ? ಹಾನಿಗೊಳಗಾದ ರೈತ ಶಂಭಯ್ಯ ಅವರಿಗೆ ನೆರವು ದೊರೆಯುತ್ತದೆಯೇ? ಅಥವಾ ಕಾಡಾನೆಗಳ ದಾಳಿಗೆ ರೈತರು ತಮ್ಮ ಕೃಷಿ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಲೇ ಇರಬೇಕೇ? ಎಂಬುದನ್ನು ಕಾದು ನೋಡಬೇಕಿದೆ.Bore well jk02_new jk02 new

 

English Summary
Title

Bore well damaged by wild elephant attack: Farmer awaits compensation

Short Description
A farmer has requested appropriate compensation after a borewell on his land was damaged in an attack by a wild elephant. The borewell, located on the land of a farmer named Shambayya in Gujjegowdanapura, was damaged during the wild elephant attack. This incident is not merely an isolated issue for one farmer; it reflects the broader concerns of farmers who make a living through agriculture in villages situated along the forest fringes.
Keywords
Bore well, damaged, wild elephant, attack, Farmer, compensation