ಬೆಂಗಳೂರು, ಅಕ್ಟೋಬರ್, 15,2026 (www.justkannada.in): ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಿಸದೇ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ ಹಾಗೆ ತನಿಖೆ ಮಾಡಲು ಆಗಲ್ಲ. ಯಾರ ಮೇಲೆ ಸಂಶಯವಿದೆ ಅವರನ್ನ ಕರೆಸುತ್ತೇವೆ. ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ? ಎಂದು ಟಾಂಗ್ ಕೊಟ್ಟರು.
ಹೆಚ್ ಡಿಕೆ ಮಾಡಿರುವ ಆರೋಪಗಳಿಗೆ ಉತ್ತರ ಕೊಡೋದಕ್ಕೆ ಆಗೋದಿಲ್ಲ. ಒಂದು ದೂರು ಬಂದಿದ್ದು, ಪ್ರಕರಣ ಸಂಬಂಧ ಯಾರ ಯಾರ ಮೇಲೆ ಸಂಶಯವಿದೆ ಅವರನ್ನು ಕರೆಸುತ್ತೇವೆ. ಪ್ರೋಟೋಕಾಲ್ ಪ್ರಕಾರವಾಗಿ ತನಿಖೆ ನಡೆಸುತ್ತಿದ್ದೇವೆ. ದಿನನಿತ್ಯ ಮಾಧ್ಯಮ ಮುಂದೆ ತನಗೆಲ್ಲ ಮಾಹಿತಿ ಇದೆ ಎಂದು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ಕೊಡಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.






