ಇಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ಟಿ-20 ಪಂದ್ಯಾವಳಿ

ಬೆಂಗಳೂರು, ಸೆಪ್ಟೆಂಬರ್ 20, 2022 (www.justkannada.in): ಇಂದಿನಿಂದ  ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಇಂದಿನ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳು ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್‌ನಲ್ಲಿ (ಸೆಪ್ಟೆಂಬರ್ 25) ನಡೆಯಲಿವೆ.

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಆಡುವ 11ರ ಬಳಗವನ್ನು ಹುಡುಕಲು ಎರಡೂ ತಂಡಗಳು ಸರಣಿಯನ್ನು ಬಳಸಿಕೊಳ್ಳುತ್ತವೆ.

ಭಾರತ ತಂಡದ ಬಗ್ಗೆ ಹೇಳುವುದಾದರೆ, ಬ್ಯಾಟಿಂಗ್ ವಿಭಾಗ ಉತ್ತಮವಾಗಿ ಕಾಣುತ್ತದೆ. ಏತನ್ಮಧ್ಯೆ ಭಾರತದ ಬೌಲಿಂಗ್ ಕೂಡ ಹೆಚ್ಚು ಕಡಿಮೆ ಉತ್ತಮಗೊಂಡಿದೆ.