ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ.

ಶಿವಮೊಗ್ಗ,ಸೆಪ್ಟಂಬರ್,20,2022(www.justkannada.in): ಮೂವರು ಶಂಕಿತ ಐಸಿಸ್ ಉಗ್ರರನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು  ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತೀರ್ಥಹಳ್ಳಿ ಶಾರಿಕ್, ಯಾಸೀನ್ ಮತ್ತು ಮಂಗಳೂರಿನ ಮಾಜ್ ಬಂಧಿತ ಶಂಕಿತ ಉಗ್ರರು. ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸೀನ್, ತೀರ್ಥಹಳ್ಳಿಯ ಶಾರಿಕ್ ಮತ್ತು ಮಂಗಳೂರಿನ ಮಾಜ್ ನನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಗೆ ಐಸಿಸ್ ಉಗ್ರರ ಜೊತೆ ಸಂಪರ್ಕ ಇರುವ ಶಂಕೆ ವ್ಯಕ್ತವಾಗಿದೆ. ಯಾಸಿನ್ ಎಲೆಕ್ಟ್ರಿಕ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ.

ಜಬೀವುಲ್ಲಾ ಬಾಯ್ಬಿಟ್ಟ ಮಾಹಿತಿ ಆಧಾರದಲ್ಲಿ ಮೂವರಿಗೆ ಗಾಳ ಹಾಕಲಾಗಿತ್ತು. ಆಗಸ್ಟ್ 15ರಂದು ನಡೆದ ಪ್ರೇಮಸಿಂಗ್ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಅವರನ್ನ ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಡಿವೈಎಸ್ಪಿ ಜಿತೇಂದ್ರ ಅವರು ತಮ್ಮ ತನಿಖೆಯ ವೇಳೆ ಜಬೀವುಲ್ಲಾ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದಿದೆ.

ಮೂವರು ಐಸಿಸ್ ಜೊತೆ ನೇರ ಸಂಪರ್ಕ ಹೊಂದಿರುವ ಬಗ್ಗೆ  ಶಂಕೆ ವ್ಯಕ್ತವಾಗಿದೆ. ಮೂವರ ಮೇಲೆ  UAPA ಅಡಿ ಕೇಸ್ ದಾಖಲು ಮಾಡಲಾಗಿದೆ.

Key words: Three -suspected –terrorists- arrested – Shimoga.