Wednesday, August 26, 2026

BDA Apartments

Home Front Page ರಾಜ್ಯ ಸರ್ಕಾರದ ಬಗ್ಗೆ 20 ‘ಕೈ’ ಶಾಸಕರಿಗೆ ಅತೃಪ್ತಿ: ಯಾವಾಗ ಏನು ಬೇಕಾದ್ರೂ ಆಗಬಹುದು ಕಾದು...

ರಾಜ್ಯ ಸರ್ಕಾರದ ಬಗ್ಗೆ 20 ‘ಕೈ’ ಶಾಸಕರಿಗೆ ಅತೃಪ್ತಿ: ಯಾವಾಗ ಏನು ಬೇಕಾದ್ರೂ ಆಗಬಹುದು ಕಾದು ನೋಡಿ – ಬಿಎಸ್ ಯಡಿಯೂರಪ್ಪ…

ಹುಬ್ಬಳ್ಳಿ, ಮೇ 10,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ 20 ಕಾಂಗ್ರೆಸ್ ಶಾಸಕರಿಗೆ ಅತೃಪ್ತಿ ಇದೆ. ಹೀಗಾಗಿ ಈ ಶಾಸಕರು ಯಾವ ಸಂದರ್ಭದಲ್ಲಾದರೂ ನಿರ್ಧಾರ ತೆಗೆದುಕೊಳ್ಳಬಹುದು ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ,  ರಾಜ್ಯ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿರುವ ಕಾಂಗ್ರೆಸ್ ನ 20 ಶಾಸಕರು ಯಾವಾಗ ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಅವರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ಅವರೆಲ್ಲ ಯಾವುದೇ ಕ್ಷಣದಲ್ಲಿ, ಏನು ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಕಾದು ನೋಡಿ ಎಂದು ಅವರು ಹೇಳಿದರು.

ಬಿಜೆಪಿಗೆ ಈಗಾಗಲೇ 104 ಸ್ಥಾನಗಳಿವೆ. ಈಗಾಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಮಗೆ ಬೆಂಬಲ ನೀಡಿದ್ದಾರೆ..  ಕುಂದಗೋಳ, ಚಿಂಚೊಳಿಯಲ್ಲಿ ಗೆಲ್ಲುತ್ತೇವೆ. ಇದರಿಂದ 106 ಸ್ಥಾನವಾಗಲಿದೆ. ಇದರಿಂದ ನಮಗೆ ಸರ್ಕಾರ ರಚಿಸಲು ಅನುಕೂಲವಾಗಲಿದೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words: About -20 congress-MLAs -unhappy – state government -BS Yeddyurappa