ಶಾಸಕ ಸುರೇಶ್ ಗೌಡ ಹೇಳಿಕೆಯಿಂದ ನನ್ನ ಗೌರವಕ್ಕೆ ಧಕ್ಕೆಯಾಗಲ್ಲ- ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ…

ಮಂಡ್ಯ,ಮೇ,10,2019(www.justkannada.in): ಜೆಡಿಎಸ್  ಶಾಸಕ ಸುರೇಶ್ ಗೌಡ ಹೇಳಿಕೆಯನ್ನ ನನ್ನ ಗೌರವಕ್ಕೆ ಧಕ್ಕೆ ಆಗಲ್ಲ.  ಹೇಳಿಕೆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶಾಸಕ ಸುರೇಶ್ ಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ, ಶಾಸಕ ಸುರೇಶ್ ಗೌಡ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ.  ಸುರೇಶ್ ಗೌಡರ ಬಗ್ಗೆ ಮಾತನಾಡಲ್ಲ. ಸುರೇಶ್ ಗೌಡರಿಂದ ಯಾರೇ ಹೇಳಿಕೆ ಕೊಡಿಸಿದರೂ ನಾನು ತಲೆ ಕೆಡಿಸಿಕೊಳ್ಳಲ್ಲ. ವ್ಯಭಿಚಾರ ಹೇಳಿಕೆ ನನಗೆ ಆಶ್ಚರ್ಯ ತರಿಸಿಲ್ಲ. ಸುರೇಶ್ ಗೌಡಗೆ ಒಳ್ಳೆಯದಾಗಲಿ ಎಂದು ಜೆಡಿಎಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದರು.

ಹಾಗೆಯೇ ನಿಖಿಲ್ ಕುಮಾರಸ್ವಾಮಿ ಗೆಲುವಿನಲ್ಲಿ ರಾಜಕಾರಣ ಇಲ್ಲ. ನನ್ನನ್ನ ವಿಶ್ವಾಸ ತೆಗೆದುಕೊಳ್ಳಿ ಎಂದು ಪುಟ್ಟರಾಜುರನ್ನ ಕೇಳಿಲ್ಲ. ಅದರ ಅಗತ್ಯವಿಲ್ಲ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಇಂದು ಬೆಳಿಗ್ಗೆ ಮಾತನಾಡಿದ ಶಾಸಕ ಸುರೇಶ್ ಗೌಡ, ಚಲುವರಾಯಸ್ವಾಮಿ, ಓರ್ವ ದುಷ್ಟ, ರಾಜಕೀಯ ವ್ಯಭಿಚಾರ ಕೆಲಸ ಮಾಡ್ತಾರೆ. ನನಗೆ ಬಹಳ ತೊಂದರೆ ಕೊಟ್ಟಿದ್ದಾನೆ. ಮೈತ್ರಿ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿ ಹಣ ಹಂಚಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

Key words: Suresh Gowda- statement -not my –concern- Congress- leader- Chaluvarasaswamy.