ಭಾರತ-ಪಾಕ್  ಟಿ-20 ವಿಶ್ವಕಪ್ ಪಂದ್ಯ: ಟೀಂ ಇಂಡಿಯಾ ಆಟಗಾರರಿಗೆ ಶುಭ ಹಾರೈಸಿದ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಅಕ್ಟೋಬರ್,24,2021(www.justkannada.in): ಟಿ-20 ವಿಶ್ವಕಪ್ ಕ್ರೇಜ್ ಎಲ್ಲೆಡೆ ಶುರುವಾಗಿದ್ದು  ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ  ಮೊದಲ ಪಂದ್ಯವನ್ನಾಡುವ ಮೂಲಕ ಶುಭಾರಂಭ ಮಾಡಲು ಸಜ್ಜಾಗಿದೆ. ಈ ನಡುವೆ ಟೀಂ ಇಂಡಿಯಾ ಆಟಗಾರರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಶುಭ ಹಾರೈಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ನಮ್ಮಲ್ಲಿ ಕೆಲ ದೇಶದ್ರೋಹಿಗಳಿದ್ದಾರೆ.  ಕ್ರಿಕೆಟ್ ನಲ್ಲೂ ಪಾಕ್ ಪರ ಇರ್ತಾರೆ. ಆಟವನ್ನ ಆಟದ ರೀತಿ ನೋಡಬೇಕು. ಆಟದಲ್ಲಿ ಯಾವುದೇ ಧ್ವೇಷವನ್ನ ಕಾಣಬಾರದು. ನಮ್ಮ ದೇಶದ ಕ್ರೀಡಾಪಟುಗಳ ಶ್ರಮಕ್ಕೆ ಶುಭಹಾರೈಸುತ್ತೇನೆ ಎಂದು ತಿಳಿಸಿದರು.

Key words: India-Pak -T20 World Cup –match-Minister- KS Eshwarappa -wished – Team India- players