‘CAA’  ಜಾರಿ : ಪೌರತ್ವ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ ಪ್ರಕಟಿಸಿದ ಕೇಂದ್ರ ಸರ್ಕಾರ.

ನವದೆಹಲಿ,ಮಾರ್ಚ್,11,2024(www.justkannada.in):  ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(CAA)ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ ಭರವಸೆಯನ್ನ ಈಡೇರಿಸಲು ಮುಂದಾಗಿದೆ.

ಕೇಂದ್ರ ಗೃಹ ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದ್ದು, ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಂದ್ರವು ಅಧಿಸೂಚನೆಯನ್ನು ಜಾರಿಗೆ ತಂದಿದೆ. 2014 ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಆಗಮಿಸಿದವರಿಗೆ  ಇದು ಅನ್ವಯವಾಗಲಿದೆ.

2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಾಗರಿಕರಿಗೆ ಪೌರತ್ವವನ್ನು ನೀಡಲು ಕಾನೂನಿನ ನಿಯಮಗಳನ್ನು ಕೇಂದ್ರ ಇಂದು ಘೋಷಿಸಿದೆ. ಲೋಕಸಭೆ ಚುನಾವಣೆಗೂ ಮುನ್ನ ಭರವಸೆಯಂತೆ ಸಿಎಎ ಜಾರಿಗೊಳಿಸಿದೆ.

Key words: Implementation -‘CAA- central government – notification – Citizenship Amendment Act.