ಅಹಿಂದ ಅನ್ನಭಾಗ್ಯ ಅಂತಾರೆ. ಎಲ್ಲಾ ಭಾಗ್ಯವೂ ಹಿಂದೆಯೇ ಇತ್ತು- ಸಿದ್ಧರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗು.

0
1

ಬೆಂಗಳೂರು,ಅಕ್ಟೋಬರ್,27,2021(www.justkannada.in): ಸಿದ್ಧರಾಮಯ್ಯ ಅಹಿಂದ ಅನ್ನಭಾಗ್ಯ ಅಂತಾರೆ. ಎಲ್ಲಾ ಭಾಗ್ಯವೂ ಹಿಂದೆಯೇ ಇತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಜನರ ಮನಸ್ಸಿನಲ್ಲಿ ಕಾಂಗ್ರೆಸ್ ನವರು ಅಪಪ್ರಚಾರ ಮಾಡ್ತಿದ್ದಾರೆ. ಜೆಡಿಎಸ್ ಅನ್ನ ಬಿಜೆಪಿಯ ಬಿ ಟೀಂ ಎಂದು ಬಿಂಬಿಸುತ್ತಿದ್ದಾರೆ . ಹಾಸನದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಅನ್ನ ಬಿಜೆಪಿಯ ಬಿ ಟೀಮ್ ಎಂದಿದ್ರು. ಆದರೆ ಇಲ್ಲಿವರೆಗೂ ಹಾಸನದಲ್ಲಿ ಕಾಂಗ್ರೆಸ್ ತಲೆ ಎತ್ತಲು ಆಗಿಲ್ಲ ಎಂದು ಲೇವಡಿ ಮಾಡಿದರು.

ಸಿದ್ಧು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿದ್ಧರಾಮಯ್ಯ  ಜಾತಿವಾದಿಯಲ್ಲ ಬಸವವಾದಿ ಅಂತಾರೆ. ಸಿದ್ಧರಾಮಯ್ಯ ಕೇವಲ ಪ್ರಚಾರ ಮಾಡ್ತಾರೆ. ಜನರ ಭಾವನೆಗೆ ಸ್ಪಂದಿಸಲ್ಲ. ಅಹಿಂದ ಅನ್ನಭಾಗ್ಯ ಅಂತಾ ಸಿದ್ಧರಾಮಯ್ಯ ಹೇಳ್ತಾರೆ. ಎಲ್ಲಾ ಭಾಗ್ಯವೂ ಹಿಂದೆಯೂ ಇತ್ತು. ಚುನಾವಣೆ ಟೈಮ್ ನಲ್ಲಿ  ರಾಜಕೀಯ ಜೀವನದಲ್ಲಿ ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಹೆಚ್.ಡಿಡಿ ಟೀಕಿಸಿದರು.

Key words: Former Prime Minister -HD Deve Gowda – agains-t Siddaramaiah.