ಕೇಂದ್ರ ಏನೇ ಅಡೆತಡೆ ಮಾಡಿದ್ರೂ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ- ಸಚಿವ ಕೃಷ್ಣ ಬೈರೇಗೌಡ.

ಕೋಲಾರ,ಜೂನ್,24,2023(www.justkannada.in): ಕೇಂದ್ರ  ಸರ್ಕಾರ ಏನೇ ಅಡೆತಡೆ ಮಾಡಿದ್ರೂ  ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ  ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಕೋಲಾರದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ,  ಏನೇ ಅಡೆ ತಡೆ ಇದ್ರೂ  ಅಕ್ಕಿ ಕೊಟ್ಟೇ ಕೊಡುತ್ತೇವೆ. ನಮ್ಮ ದಾರಿಯಲ್ಲಿ ಕಲ್ಲು ಮುಳ್ಳು ಏನೇ  ಇರಲಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಕೇಂದ್ರ ಸರ್ಕಾರ ನಮ್ಮ ದಾರಿಗೆ ಬೆಟ್ಟವನ್ನೇ ಅಡ್ಡ ತಂದು ಕೂರಿಸಿದರೆ ಬೆಟ್ಟವನ್ನು ಹತ್ತಿ ಜನರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದರು.

ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿರುವ ಹಿನ್ನೆಲೆ ಇಂದು ಸಿಎಂ ಸಿದ್ಧರಾಮಯ್ಯ ಸಭೆ ನಡೆಸಿ ಮೂರು ಏಜೆನ್ಸಿಗಳಿಗೆ ಅಕ್ಕಿ ಪೂರೈಕೆ ಮಾಡಲು ಟೆಂಡರ್ ಪ್ರಕ್ರಿಯೆಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ಮೂರು ಏಜೆನ್ಸಿಗಳು ಒಂದು ವಾರ ಸಮಯ ಕೇಳಿದ್ದು ನಂತರ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Key words: central-rice-minister-Krishnabyregowda