ಅಕ್ಕಿ ಪೂರೈಕೆಗೆ ಮೂರು ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆಗೆ ಸೂಚನೆ: ಒಂದು ವಾರದಲ್ಲಿ ತೀರ್ಮಾನ- ಸಚಿವ ಕೆ.ಎಚ್ ಮುನಿಯಪ್ಪ.

ಬೆಂಗಳೂರು,ಜೂನ್,24,2023(www.justkannada.in):  ಅಕ್ಕಿ ಪೂರೈಕೆ ಮಾಡಲು ಮೂರು ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಲಾಗಿದೆ. ಮೂರು ಏಜೆನ್ಸಿಗಳು ಒಂದು ವಾರ ಟೈಮ್ ಕೇಳಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಅನ್ನಭಾಗ್ಯ ಯೋಜನೆ ಜಾರಿ ಅಕ್ಕಿ ಪೂರೈಕೆ ಸಂಬಂಧ ಇಂದು ಏಜೆನ್ಸಿಗಳ ಜೊತೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಪೂರೈಕೆಗೆ ತಕ್ಷಣ ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಸಿಸಿಎಫ್‌, ನಾಫೆಡ್‌, ಕೇಂದ್ರೀಯ ಭಂಡಾರದವರಿಗೆ ಸೂಚಿಸಿದ್ದೇವೆ. ಅಕ್ಕಿ ದರ ನಿಗದಿ ಮಾಡುವುದು ಆ ಮೂರು ಏಜೆನ್ಸಿಗಳಿಗೆ ಬಿಟ್ಟಿದ್ದು ಎಂದರು.

ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಟ್ರೇಡರ್ಸ್‌, ಮಿಲ್‌ ಮಾಲೀಕರ ಜೊತೆ ಚರ್ಚಿಸಿ ತೀರ್ಮಾನಿಸುತ್ತಾರೆ. ಈ ಹಿಂದೆಯೂ ರಾಜ್ಯದಲ್ಲಿ ಇದೇ ಸಂಸ್ಥೆಗಳಿಂದ ಅಕ್ಕಿ ತರಿಸಲಾಗಿತ್ತು. ಸಂಸ್ಥೆಗಳಿಂದ ಪೂರೈಕೆ ಬಳಿಕ ಸರ್ಕಾರ ಅಕ್ಕಿ ಸರಬರಾಜು ಮಾಡುತ್ತದೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words: tender -process – three agencies – supply – rice-Minister -KH Muniappa