ಬರ ನಿರ್ವಹಣೆಗೆ ಹೆಚ್ಚಿನ ಆದ್ಯತೆ : ಬೋರ್ ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ – ಸಚಿವ ಕೃಷ್ಣಬೈರೇಗೌಡ.

ಬೆಂಗಳೂರು,ಮಾರ್ಚ್,1,2024(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಬರಪರಿಸ್ಥಿತಿ ಆವರಿಸಿದ್ದು,   ಬರ ನಿರ್ವಹಣೆ ಕಡೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಲಾಗಿದೆ. ಬೋರ್ ವೆಲ್ ಮೂಲಕವೂ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಡಿಸಿ, ಎಸಿ, ಸರ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇನ್ಮೇಲೆ ಸಮಸ್ಯೆ ಉಲ್ಬಣ ಆಗಲಿದೆ ಮೇ ತಿಂಗಳಲ್ಲಿ ಸಮಸ್ಯೆ ಹೆಚ್ಚಾಗಬಹುದು. ಹೀಗಾಗಿ ಬರ ನಿರ್ವಹಣೆಗೆ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ತಿದ್ದೇವೆ. ಕುಡಿಯುವ ನೀರು, ಮೇವಿಗೆ ಆದ್ಯತೆ ಕೊಟ್ಟಿದ್ದೇವೆ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ತಾಲೂಕು, ಗ್ರಾ.ಪಂ ಲೆವೆಲ್ ನಲ್ಲಿ ಟೆಂಡರ್ ಗೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ತುರ್ತು ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. 24 ಗಂಟೆಯೊಳಗೆ ನೀರು ಕೊಡುವುದು ಕಷ್ಟ ಅದಕ್ಕೆ ಟ್ಯಾಂಕರ್ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಟ್ಯಾಂಕರ್ ಮೂಲಕ ನೀರು ಪೂರೈಕೆ ಕಷ್ಟ ಬೋರ್ ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಬೋರ್ ವೆಲ್ ವಶಕ್ಕೆ ಪಡೆಯುತ್ತೇವೆ. ಬರಗಾಲದ ವೇಳೆ ‌ಬೋರ್ ವೆಲ್ ಗೆ ನೀರು ಸಿಗ್ತಿಲ್ಲ. ಬೋರ್ ಕೊರೆದ್ರೂ ಪ್ರಯೋಜನವಿಲ್ಲ. ಬೋರ್ ವೆಲ್ ಹಾಕಿದ್ರೂ ಉಪ್ಪು ನೀರು ಸಿಗುತ್ತೆ. ಆ ಕಾರಣಕ್ಕೆ ಖಾಸಗಿ‌ ಬೋರ್ ವೆಲ್ ವಶಕ್ಕೆ ಪಡೆದುಕೊಳ್ತಿದ್ದೇವೆ. 116 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗಿದೆ. 170 ಟ್ಯಾಂಕ್ ಮೂಲಕ ನೀರು ಕೊಡ್ತಿದ್ದೇವೆ. 380 ಹಳ್ಳಿಗಳಲ್ಲಿ ಬೋರ್ ವೆಲ್ ಮೂಲಕ ನೀರು ಕೊಡುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಗರ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಇದ. 57 ವಾರ್ಡ್ ಗಳಲ್ಲಿ ಕುಡಿಯುವ ನೀರು ಸಿಗ್ತಿಲ್ಲ.1200 ವಾರ್ಡ್ ಗಳಲ್ಲಿ ನೀರಿನ ಕೊರತೆ ಎದುರಾಗಬಹುದು. ಅಂತಹ ಕಡೆ ಟ್ಯಾಂಕರ್ ಮೂಲಕ ನೀರು ಕೊಡಬೇಕಿದೆ. 7377 +ಹಳ್ಳಿಗಳಲ್ಲೂ ನೀರಿನ ‌ಕೊರತೆ ಎದುರಾಗಲಿದೆ. ಅಲ್ಲಿಯೂ 7080  ಖಾಸಗಿ ಬೋರ್ ವೆಲ್ ಗುರ್ತಿಸಿದ್ದೇವೆ. 3057 ಬೋರ್ ವೆಲ್ ಗೆ ಅಗ್ರಿಮೆಂಟ್ ಹಾಕಿದ್ದೇವೆ.25 ಜಿಲ್ಲೆಗಳಲ್ಲಿ‌ ಮೇವಿನ ಕೊರತೆ ಎದುರಾಗಲಿದೆ. ಈಗಾಗಲೇ ಮೇವಿಗೆ ಟೆಂಡರ್ ಮಾಡಿದ್ದೇವೆ. ಜಿಲ್ಲೆಗೊಂದು ಗೋ ಶಾಲೆಗಳು ಇವೆ. ಮೇವು, ನೀರು ಅಲ್ಲಿಗೂ ಪೂರೈಕೆ ಮಾಡಲಾಗುತ್ತದೆ. ಹೋಬಳಿ ‌ಮಟ್ಟದಲ್ಲಿ ಗೋಶಾಲೆ ತೆರೆಯುತ್ತೇವೆ. ಟಾಸ್ಕ್ ಪೋರ್ಸ್ ಸೆಟಪ್ ಮಾಡಿದ್ದೇವೆ. ಡಿಸೆಂಬರ್ ನಿಂದ ಟಾಸ್ಕ್ ಪೋರ್ಸ್ ಸಭೆ ನಡೆದಿವೆ. ಈಗಾಗಲೇ 600 ಸಭೆಗಳನ್ನ ಮಾಡಿದ್ದೇವೆ. 856 ಕೋಟಿ 90 ಲಕ್ಷ ಹಣ ಬರ ನಿರ್ವಹಣೆಗೆ ನೀಡಿದ್ದೇವೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

ಕುಡಿಯುವ ನೀರಿನ ಟ್ಯಾಂಕರ್ ಗೆ ಡಬಲ್ ರೇಟ್ ಕೇಳುತ್ತಿರುವ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, ಇದರ ಬಗ್ಗೆ ಬಿಬಿಎಂಪಿ ಗೈಡ್ ಲೈನ್ಸ್ ಮಾಡಲಿದೆ. ನಮ್ಮ ಡಿಸಿ ಜೊತೆಗೂ ಅವರು ಮಾತನಾಡಿದ್ದಾರೆ. ಸರಿಯಾದ ದಿಕ್ಕಿನಲ್ಲೇ ಅವರು ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರು ಹೊರಭಾಗದಲ್ಲಿ ನಾವು ‌ಮಾಡ್ತೇವೆ. ಬೆಂಗಳೂರು ಹೊರವಲಯದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಅದರ ಖರ್ಚನ್ನ ನಾವೇ ಭರಿಸುತ್ತೇವೆ. ಗ್ರಾಮ ಪಂಚಾಯ್ತಿಯಿಂದಲೇ ಖರ್ಚಿನ ಹಣ ನೀಡಲಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಾವು ಸರ್ವೆಗೆ ಹೆಚ್ಚಿನ ‌ಒತ್ತು ಕೊಟ್ಟಿದ್ದೇವೆ. ಸರ್ಕಾರಿ ಭೂಮಿ ಮಂಜೂರಾಗಿರುತ್ತೆ. ಆದರೆ ಅವರಿಗೆ ಪೋಡಿ ಆಗಿರುವುದಿಲ್ಲ. ಇದರ ಬಗ್ಗೆ ಹೆಚ್ಚಿನ‌ ಗಮನ ನೀಡ್ತೇವೆ. 991 ಪರವಾನಗಿ ಸರ್ವೆಯರ್ಸ್ ಎಲ್ಲಾ ಜಿಲ್ಲೆಗೆ ಒದಗಿಸ್ತೇವೆ. 364 ಸರ್ಕಾರಿ ಸರ್ವೆಯರ್ ರಿಕ್ರೂಟ್ ಮೆಂಟ್ ಮಾಡ್ತೇವೆ. ಕೆಪಿಎಸ್ ಸಿ ಯಿಂದ ರಿಕ್ರೂಟ್ ಮಾಡಿಕೊಳ್ಳಲಾಗುತ್ತದೆ. ನೊಟಿಫಿಕೇಶನ್ ಸದ್ಯದಲ್ಲೆ ಹೊರಬೀಳಲಿದೆ. 27 ಸರ್ವೆ ಅಸಿಸ್ಟೆಂಟ್  ಡೈರೆಕ್ಟರ್ ನೇಮಕ ನಡೆಯಲಿದೆ. ಪ್ರತಿಯೊಂದು ತಾಲೂಕಿಗೆ ಆಧುನಿಕ ಉಪಕರಣ18 ಕೋಟಿ ವೆಚ್ಚದಲ್ಲಿ‌ ರೋವರ್ಸ್  ಖರೀದಿಸಲಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಆರ್ ಟಿಸಿಗೆ ಆಧಾರ್ ಜೋಡಣೆ ಮಾಡಲಿದ್ದೇವೆ. 8.16 ಲಕ್ಷ ಎಕರೆ ಕೃಷಿ ಭೂಮಿ ಆರ್ ಟಿಸಿ ಮಾಡಿದ್ದೇವೆ. ಇದು ಬೆಳೆ ಪರಿಹಾರ ಕೊಡಲು ಸಹಾಯವಾಗಲಿದೆ. 15 ಲಕ್ಷ ಆರ್ ಟಿಸಿ ಓನರ್ ಕನೆಕ್ಟ್‌ ಮಾಡಿದ್ದೇವೆ.3 ಕೋಟಿ 90 ಲಕ್ಷ ಆರ್ ಟಿಸಿ ಓನರ್ಸ್ ಇದ್ದಾರೆ. ನಾವೇ ಹುಡುಕಿ ‌ನಾವೇ ಲಿಂಕ್ ಮಾಡ್ತಿದ್ದೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ತಹಸೀಲ್ದಾರ್ ಕೋರ್ಟ್ ನಲ್ಲಿ‌ಕೇಸ್ ಇತ್ಯರ್ಥಕ್ಕೆ 212  ದಿನ ತೆಗೆದುಕೊಳ್ತಿತ್ತು. ಸರ್ಕಾರದ ಗೈಡ್ ಲೈನ್ ನಲ್ಲಿರೋದು 92 ದಿನ. ಈಗ 92  ದಿನದಲ್ಲೇ ಕ್ಲಿಯರ್ ಮಾಡ್ತಿದ್ದೇವೆ. 70  ದಿನ ಕೇಸ್ ಇತ್ಯರ್ಥಕ್ಕೆ ಮುಂದಾಗಿದ್ದೇವೆ. 2215 ಕೇಸ್ ವರ್ಷವಾದ್ರೂ ಹಾಗೆಯೇ ಇದ್ದವು. ಒಂದು ವರ್ಷದಲ್ಲಿ ಎಲ್ಲಾ ಕೇಸ್ ಕ್ಲಿಯರ್ ಮಾಡಿದ್ದೇವೆ. ಎಸಿ ಕೋರ್ಟ್ ನಲ್ಲಿ 5 ವರ್ಷಕ್ಕಿಂತ ಹೆಚ್ಚಿದೆ. 3,2787 ಕೇಸ್ ಪೆಂಡಿಂಗ್ ಇದ್ದವು. ಈಗ ಕೇವಲ 7 ಸಾವಿರ  ಕೇಸ್ ಮಾತ್ರ ಪೆಂಡಿಂಗ್ ಇವೆ ಎಂದು ತಿಳಿಸಿದರು.

ಜಾತಿ‌ ಗಣತಿ ವರದಿ ಸಲ್ಲಿಕೆ ವಿಚಾರ ಕುರಿತು ಮಾತನಾಡಿದ ಕೃಷ್ಣಬೈರೇಗೌಡ, ಅದರೊಳಗೆ ಏನಿದೆ ನೊಡೋಣ. ಪರ ವಿರೋಧ ಎಲ್ಲ ಕ್ಯಾಬಿನೆಟ್ ನಲ್ಲಿ‌ಚರ್ಚೆ ಮಾಡೋಣ. ಸಿಎಂ ಕೂಡ ವರದಿಯಲ್ಲೇನಿದೆ ನೊಡೋಣ ಎಂದಿದ್ದಾರೆ. ಬರಲಿ ನೊಡೋಣ ಈಗಲೇ ಯಾಕೆ ಎಂದು  ಕೃಷ್ಣಬೈರೇಗೌಡ ತಿಳಿಸಿದರು.

Key words: High priority- drought -management: – supply -water – bore well – Minister -Krishnabyre Gowda.