ಗೃಹ ಸಚಿವರ ಹೇಳಿಕೆ ಖಂಡನೀಯ: ಗಲಭೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಿಬೇಕು- ಅಶ‍್ವಥ್ ನಾರಾಯಣ್ ಆಗ್ರಹ.

ಬೆಂಗಳೂರು,ಅಕ್ಟೋಬರ್,2,2023(www.justkannada.in):  ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಶಿವಮೊಗ್ಗ ಘಟನೆಗೆ ಕಾರಣ ಬಹಿರಂಗಪಡಿಸಲ್ಲ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಅಶ್ವಥ್ ನಾರಾಯಣ್,   ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ಖಂಡನೀಯ. ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡಬಾರದು. ಗಲಭೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ಆಗ್ರಹಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವತ್ ನಾರಾಯಣ್,  ಯಾರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಬೇಕು. ಇದು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ. ರಕ್ಷಣೆ ಮಾಡುವುದು, ಮುಚ್ಚಿ ಹಾಕುವ ಗೃಹ ಇಲಾಖೆ ಮತ್ತು ಸರ್ಕಾರ ಪ್ರಯತ್ನ ಖಂಡನೀಯ. ಗೃಹ ಸಚಿವರ ಪ್ರಕಾರ ಶಿವಮೊಗ್ಗ ಗಲಭೆ ಸಣ್ಣ ಪುಟ್ಟ ಎಂದರೆ ದೊಡ್ಡ ಪ್ರಕರಣ ಯಾವುದು? ಯಾರ ಪ್ರಾಣ ಹೋಗಬೇಕಿತ್ತು ಎಂದು ಬಯಸುತ್ತಿದ್ದರಾ? ಏನೂ ಕ್ರಮ ವಹಿಸದೇ ಈ ರೀತಿ ಹೇಳಿಕೆ ಕೊಡುತ್ತೀರಾ? ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಪರಿಣಾಕಾರಿಯಾಗಿ ಕೆಲಸ ಮಾಡಿಲ್ಲ. ಆ ಕಾರಣಕ್ಕೆ ಗಲಭೆ, ಭಾರತದ ಮ್ಯಾಪ್ ಬದಲಾಯಿಸುವುದು ಎಲ್ಲಾ ನಡೆಯುತ್ತಿದೆ. ತುಷ್ಟಿಕರಣಕ್ಕಾಗಿ ಸರ್ಕಾರ ಸೈಲೆಂಟ್ ಆಗಿದೆ ಎಸ್ಪಿ ಮೇಲೆ ಹಲ್ಲೆ ಆಗಿದೆ. ಎಸ್ಪಿ ಕೈ ಕಟ್ಟಿ ಹಾಕಿದರೆ ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ ಅಶ್ವಥ್ ನಾರಾಯಣ್, ನಮ್ಮ ಕಾರ್ಯಕರ್ತ ಕೇವಲ ಕತ್ತಿ ವರಸೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಇಲ್ಲಿ ಕತ್ತಿ ಪ್ರದರ್ಶನ ಮಾಡಿದರೆ ಯಾವ ಕೇಸ್ ಇಲ್ಲ ಏನೂ ಇಲ್ಲ. ಬಹಿರಂಗವಾಗಿ ಇವರ ತಾರತಮ್ಯ ನೋಡಿ. ಸಿಎಂ ಅವರಿಂದ ಇಂದು ಒಂದು ಪದವೂ ಬಂದಿಲ್ಲ. ಈ ರೀತಿ ಸರ್ಕಾರ ನಡೆದುಕೊಂಡರೆ ಯಾವ ಪರಿಸ್ಥಿತಿಗೆ ಕೊಂಡೊಯ್ಯುತ್ತಾರೆ ಎನ್ನುವುದು ಆತಂಕ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

Key words: Home Minister- statement – condemnable-Ashwayath Narayan