ಹಿರಿಯ ನಟಿ ಲೀಲಾವತಿ ಮನೆಯಲ್ಲಿ ಬಿದ್ದು ಸೊಂಟ, ಕಾಲಿಗೆ ಪೆಟ್ಟು

ಬೆಂಗಳೂರು, ಆಗಸ್ಟ್ 07, 2021 (www.justkannada.in): ಹಿರಿಯ ನಟಿ ಲೀಲಾವತಿ ಜಾರಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಪೆಟ್ಟುಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಕಾಲು ಜಾರಿ ಬಿದ್ದು ಸೊಂಟ ಹಾಗೂ ತಲೆ ಭಾಗದಲ್ಲಿ ಗಾಯವಾಗಿದೆ.

ಈ ವಿಷಯವನ್ನು ಸ್ವತಹ ಪುತ್ರ ನಟ ವಿನೋದ್ ರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮನೆಯಲ್ಲಿ ಕಾಲುಜಾರಿ ಬಿದ್ದು ತಾಯಿ ಲೀಲಾವತಿಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದೊಯ್ದು.. ಚಿಕಿತ್ಸೆ ಕೊಡಿಸಿದ್ದೇನೆ ಎಂದು ತಿಳಿಸಿದ್ದಾರೆ.