ಬಾಂಬ್ ಬೆದರಿಕೆ ಪ್ರಕರಣ ಉನ್ನತ ಮಟ್ಟದ ತನಿಖೆಗೆ ವಹಿಸುವ ಕುರಿತು ಗೃಹಸಚಿವರು ನಿರ್ಧರಿಸುತ್ತಾರೆ- ಸಚಿವ ಮಧು ಬಂಗಾರಪ್ಪ.

ಬೆಂಗಳೂರು, ಡಿಸೆಂಬರ್ ,2,2023(www.justkannada.in):  ನಿನ್ನೆ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದ ಪ್ರಕರಣವನ್ನ ಉನ್ನತ ಮಟ್ಟದ ತನಿಖೆಗೆ ವಹಿಸುವ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ನಿರ್ಧರಿಸುತ್ತಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಬೆದರಿಕೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಲ್ಲ ಗೃಹ ಸಚಿವರು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ.  ಈಗಾಗಲೇ ತನಿಖೆ ಬಗ್ಗೆ ಪರಮೇಶ್ವರ್ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರು ಅಷ್ಟೆ ಅಲ್ಲ ಬೇರೆ ಕಡೆಯೂ ಹುಸಿಬಾಂಬ್ ಕರೆ ಬರುತ್ತಿದೆ ಎಂದು ತಿಳಿಸಿದರು.

Key words: Home Minister – bomb threat- case – high-level- investigation – Minister-Madhu Bangarappa