Sunday, September 20, 2026

BDA Apartments

ಇಂದಿನಿಂದ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ BDA JK_Adv BDA Adv
Home Front Page ಇಂದಿನಿಂದ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ..

ಇಂದಿನಿಂದ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ..

ಬೆಂಗಳೂರು ಡಿಸೆಂಬರ್,2.2023(www.justkannada.in):  ಇಂದಿನಿಂದ  ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ.

ಮಲ್ಲೇಶ್ವರಂನ ಶ್ರೀ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ  ಇಂದಿನಿಂದ ಡಿಸೆಂಬರ್ 4 ರವರೆಗೂ ಕಡಲೆಕಾಯಿ ಪರಿಷೆ ನಡೆಯಲಿದೆ. ಇಂದು  ಡಿಸಿಎಂ ಡಿಕೆ ಶಿವಕುಮಾರ್ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಿದ್ದಾರೆ.ಇಂದಿನಿಂದ ಬೆಂಗಳೂರಲ್ಲಿ ಕಡಲೆಕಾಯಿ ಪರಿಷೆ kadalekayi

ನಾಳೆ ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡದ ಎಲ್ ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಡಾ. ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನ ಗಾಯನ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 4ರ ಬೆಳಗ್ಗೆ 9.30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

Key words: kadalekayi Parishe-Bangalore- from- today.