Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ನನಗೆ ಬ್ಲಾಕ್ ಮೇಲ್ ಮಾಡಲು ಬಂದರೆ ನಿಮ್ಮದೂ ನಮ್ಮ ಬಳಿ ಇದೆ- ಬಿಎಸ್ ವೈ  ಮತ್ತು...

ನನಗೆ ಬ್ಲಾಕ್ ಮೇಲ್ ಮಾಡಲು ಬಂದರೆ ನಿಮ್ಮದೂ ನಮ್ಮ ಬಳಿ ಇದೆ- ಬಿಎಸ್ ವೈ  ಮತ್ತು ಬಿವೈ ವಿಜಯೇಂದ್ರ ವಿರುದ್ದ ಶಾಸಕ ಯತ್ನಾಳ್ ವಾಗ್ದಾಳಿ.

ವಿಜಯಪುರ,ಡಿಸೆಂಬರ್,2,2023(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಅಪ್ಪ ಮಗ ನಾಟಕ ಮಾಡಬೇಡಿ ಅಂತ  ಹಿಂದೆ ಹೇಳಿದ್ದೆ ಬಿಎಸ್  ಯಡಿಯೂರಪ್ಪರಿಂದಲೇ ನಿಕಟಪೂರ್ವ ಎಂದು ಬಂದಿದ್ದು ಮೊದಲು ಮಾಜಿ ಸಿಎಂ ಅಂತಿದ್ದರು. ಮುಖಭಂಗವಾಗಯತ್ತೆ ಅಂತಾ ಈಗ ನಿಕಟಪೂರ್ವ ಅಂತಿದ್ದಾರೆ ಎಲ್ಲಾ ನಾಟಕ.  ಪಕ್ಷದಲ್ಲಿ ಎಲ್ಲಾ ಹುದ್ದೆಗಳು ತಮ್ಮ ಮಕ್ಕಳಿಗೆ ಬೇಕು ಇನ್ನು ಏನಾದ್ರೂ ಇದ್ರೆ ತಮ್ಮ ಮನೆ ಬೆಕ್ಕುಗಳಿಗೂ ಕೊಡಿ. ಪ್ರಧಾನ ಕಾರ್ಯದರ್ಶಿ ಉಪಕಾರ್ಯದರ್ಶಿ  ಅಂತಾನೂ ಇಟ್ಟುಕೊಳ್ಳಿ  ಎಂದು ಲೇವಡಿ ಮಾಡಿದರು.

ಬ್ಲಾಕ್ ಮೇಲ್ ಮಾಡೋಕೆ ಬಂದರೆ ನಿಮ್ಮದು ನನ್ನ ಬಳಿ ಇದೆ

ರೈತರ ಬಗ್ಗೆ ಕಣ್ಣೀರು ಹಾಕೋದು ನೋಡ್ಬಿಟ್ರೆ ಎಲ್ಲಾ ನಾಟಕ. ನಾನು ಯಾವುದಕ್ಕೂ ಅಂಜುವುದಿಲ್ಲ   ನನಗೆ ಹೆದರಿಸಬೇಕು ಅಂತಾ ಬ್ಲಾಕ್ ಮೇಲ್ ಮಾಡುತ್ತಾರೆ. ಬ್ಲಾಕ್ ಮೇಲ್ ಮಾಡಲು ಬಂದರೆ ನಿಮ್ಮದೂ ತೆಗೆಯುತ್ತೇನೆ. ಬ್ಲಾಕ್ ಮೇಲ್ ಮಾಡೋಕೆ ಬಂದರೆ ನಿಮ್ಮದು ನನ್ನ ಬಳಿ ಇದೆ.  ಈಗ ಡಿಸಿಎಂ ಡಿಕೆ ಶಿವಕುಮಾರದ್ದು ತೆಗೆದಿದ್ದೇನೆ. ಡಿಕೆಶಿ ವಿರುದ್ದ ಮತ್ತೊಂದು ಕೇಸ್ ದಾಖಲಿಸುತ್ತೇವೆ ಎಂದು ಹೇಳಿದರು.

Key words: blackmail- me- MLA- Yatnal – against -BSY – BY Vijayendra.