ಮಾಲಿವುಡ್’ಗೂ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್: ಪೃಥ್ವಿರಾಜ್ ಸಿನಿಮಾ ನಿರ್ಮಾಣ

ಬೆಂಗಳೂರು, ಜೂನ್ 11, 2022 (www.justkannada.in): ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದೆ.

ಈ ಮೂಲಕ ಕನ್ನಡದ ನಿರ್ಮಾಣ ಸಂಸ್ಥೆ ನಿಧಾನವಾಗಿ ಬೇರೆ ಬೇರೆ ಇಂಡಸ್ಟ್ರಿಗೂ ಕಾಲಿಡುತ್ತಿದೆ. ಈ ಬಾರಿ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ.

ಪೃಥ್ವಿರಾಜ್ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಲಿದ್ದಾರೆ. ಈ ಮೂಲಕ ಮಲಯಾಳಂ ಬಾಕ್ಸಾಫೀಸ್‌ನಲ್ಲೂ ಸುನಾಮಿ ಎಬ್ಬಿಸಲು ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.

ಕನ್ನಡ, ತೆಲುಗು ಬಳಿಕ. ಮಲಯಾಳಂ ಚಿತ್ರರಂಗಕ್ಕೆ  ಹೊಂಬಾಳೆ ಫಿಲ್ಮ್ಸ್ ಕಾಲಿಟ್ಟಿದೆ. ಮಾಲಿವುಡ್‌ನಲ್ಲಿ ತನ್ನ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲಾಗಿದೆ.