Saturday, September 5, 2026

BDA Apartments

Home Front Page ಚೆನ್ನಮ್ಮ ಅವರ ಪಾರ್ಥೀವ ಶರೀರ ಮೆರವಣಿಗೆ : ರಸ್ತೆಯುದ್ದಕ್ಕೂ ಕಿಕ್ಕಿರಿದು ನಿಂತ ಜನರು

ಚೆನ್ನಮ್ಮ ಅವರ ಪಾರ್ಥೀವ ಶರೀರ ಮೆರವಣಿಗೆ : ರಸ್ತೆಯುದ್ದಕ್ಕೂ ಕಿಕ್ಕಿರಿದು ನಿಂತ ಜನರು

ಹಾಸನ,ಜುಲೈ,20,2026 (www.justkannada.in): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಪಾರ್ಥೀವ ಶರೀರದ ಅಂತಿಮ ಮೆರವಣಿಗೆ ಆರಂಭವಾಗಿದ್ದು ರಸ್ತೆಯುದ್ದಕ್ಕೂ ಕಿಕ್ಕಿರಿದು ನಿಂತಿರುವ ಸಾರ್ವಜನಿಕರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಹೊಳೇನರಸಿಪುರದಲ್ಲಿ ಪುತ್ರ ಹೆಚ್ ಡಿ ರೇವಣ್ಣ ಅವರ ನಿವಾಸದಲ್ಲಿ ಚೆನ್ನಮ್ಮ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜನ ಸಾಗರವೇ ಹರಿದು ಬಂದು ಅಂತಿಮ ದರ್ಶನ ಪಡೆದರು.

ಇದೀಗ ಹೊಳೇನರಸಿಪುರದಿಂದ ಹರದನಹಳ್ಳಿಗೆ ಚೆನ್ನಮ್ಮರ ಪಾರ್ಥೀವ ಶರೀರವನ್ನ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತಿದ್ದು ಜನರು ರಸ್ತೆಬದಿಯಲ್ಲಿ ನಿಂತು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಹರದನಹಳ್ಳಿಯ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹರದನಹಳ್ಳಿಯಲ್ಲೂ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Key words: HD Devegowda’s, wife Chennamma, mortal remains, Hassan, Crowds