Saturday, September 5, 2026

BDA Apartments

Home Front Page ಬಿಡದಿ ಟೌನ್ ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾಗೊಳಿಸಿದ ಹೈಕೋರ್ಟ್

ಬಿಡದಿ ಟೌನ್ ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು,ಜುಲೈ,20,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆಗೆ ಭೂಸ್ವಾಧೀನ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮೈಸೂರಿನ ರಾಜೇಶ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಸಿಜೆ ವಿಭುಬಕ್ರು ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ಭೂಸ್ವಾಧೀನಕ್ಕೂ ಮುನ್ನ ಸಾಮಾಜಿಕ ಪರಿಣಾಮ ಅಧ್ಯಯನ ನಡೆಸಿಲ್ಲ.  ಪುನರ್ವಸತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಯಿಲ್ಲದ ರಿಯಲ್ ಎಸ್ಟೇಟ್ ಯೋಜನೆ. ಈ ಯೋಜನೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ  ಅರ್ಜಿದಾರ ಕೆಬಿ ರಾಜೇಶ್ ವಾದಿಸಿದರು.

ಈ ವೇಳೆ ಯಾವ ಕಾಯ್ದೆ ಯಾವ ಕಾನೂನು ಉಲ್ಲಂಘನೆಯಾಗಿದೆ ತಿಳಿಸಿ ಎಂದು ಸಿಜೆ ವಿಭಾಗೀಯ ಪೀಠ ಅರ್ಜಿದಾರರಿಗೆ ಪ್ರಶ್ನಿಸಿತು.   ಹೊಸ ಕಾಯ್ದೆಯಡಿ ಭೂಸ್ವಾದೀನ ಮಾಡಿಲ್ಲ. ಸ್ವಾಧೀನಕ್ಕೆ ಕೆಯುಡಿ ಕಾಯ್ದೆ ಪರಿಹಾರಕ್ಕೆ ಹೊಸ ಕಾಯ್ದೆ ಅನ್ವಯಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಆದರೆ   ಅರ್ಜಿದಾರರ ವಾದ ತಿರಸ್ಕರಿಸಿ ನ್ಯಾಯಪೀಠವು ಪಿಐಎಲ್ ವಜಾಗೊಳಿಸಿತು.

Key words: High Court, dismisses,  PIL, Bidadi Township, land acquisition