ಕಲಬುರುಗಿ,ಸೆಪ್ಟಂಬರ್,5,2026 (www.justkannada.in): ನಾನು ಗೃಹ ಸಚಿವನಾಗಿರುವವರೆಗೂ ಕೆಪಿಎಸ್ ಸಿ ನೇಮಕಾತಿ ಹಗರಣದ ತನಿಖೇ ಹಳ್ಳ ಹಿಡಿಯಲು ಬಿಡಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪ್ರಕರಣ ಸಂಬಂಧ ಸಿಐಡಿಯಿಂದ ತನಿಖೆ ನಡೆಯುತ್ತಿದೆ. ನಮ್ಮ ಪೊಲೀಸ್ ನವರೇ ಐಎಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಜೈಲಿಗೆ ಹೋಗಿ ಬಂದವರು ನಾನು ಜೈಲಿಗೆ ಹೋಗ್ತೇನೆ ಅಂತಾರೆ. ಶ್ರೀರಾಮುಲು ಅವರಿಗೆ ಮೊದಲು ಕನ್ನಡ ಕಲಿಯೋಕೆ ಹೇಳಿ. ಕೆಪಿಎಸ್ ಸಿ ಫುಲ್ ಫಾರ್ಮ್ ಗೊತ್ತಾ ಎಂದು ಕೇಳಿ ಅವರಿಗೆ. ಅಂತವರಿಂದ ನಾನು ಕಲಿಯಬೇಕಾ ಎಂದು ವಾಗ್ದಾಳಿ ನಡೆಸಿದರು.
ರಿಪಪಬ್ಲಿಕ್ ಬಳ್ಳಾರಿ ಮಾಡಿದವರು ಅವರು . ನಾನು ಗೃಹ ಸಚಿವನಾಗಿರುವವರೆಗೂ ತನಿಖೆ ಹಳ್ಳ ಹಿಡಿಯಲು ಬಿಡಲ್ಲ ಎಂದರು.
Key words: KPSC scam, investigation. Home Minister, Priyank Kharge







