Saturday, September 5, 2026

BDA Apartments

Home Front Page ಸಿಜೆಪಿಯಿಂದ ಸಂಸತ್ ಭವನ ಚಲೋ: ಪ್ರತಿಭಟನೆ ತೀವ್ರ ಸ್ವರೂಪ , ಪೊಲೀಸರ ಹರಸಾಹಸ

ಸಿಜೆಪಿಯಿಂದ ಸಂಸತ್ ಭವನ ಚಲೋ: ಪ್ರತಿಭಟನೆ ತೀವ್ರ ಸ್ವರೂಪ , ಪೊಲೀಸರ ಹರಸಾಹಸ

ನವದೆಹಲಿ,ಜುಲೈ,20,2026 (www.justkannada.in): ನೀಟ್ ಪರೀಕ್ಷೆಯಲ್ಲಿ ಅಕ್ರಮ ವಿರೋಧಿಸಿ  ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೊಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಸಿಜೆಪಿಯಿಂದ ಸಂಸತ್ ಭವನ ಚಲೋ ಹಮ್ಮಿಕೊಂಡಿದ್ದು  ಪ್ರತಿಭಟನಾನಿರತ ವಿದ್ಯಾರ್ಥಿಗಳು ಸಂಸತ್ ಭವನದ ಬಳಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನ ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು ಅಶ್ರವಾಯು ಪ್ರಯೋಗಿಸಿದ್ದಾರೆ ಎನ್ನಲಾಗಿದೆ.

ಇತ್ತ ಪ್ರತಿಭಟನಾಕಾರರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದ್ದು  ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.  ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಸಿಜೆಪಿ ಹೋರಾಟಕ್ಕೆ ಎಎಪಿ ನಾಯಕರು ಬೆಂಬಲಿಸಿದ್ದು ಮಾಜಿ ಸಿಎಂ ಅತಿಶಿ ಮನೀಶ್ ಸಿಸೋಡಿಯಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Key words:  CJP, Protest, New Dehli, police