ಕೊಡವ ಡ್ಯಾನ್ಸ್ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ-ಭುವನ್

ಬೆಂಗಳೂರು, ಜೂನ್ 02, 2021 (www.justkannada.in): ಕೋವಿಡ್ ಸಂಕಷ್ಟ ಕಾಲದಲ್ಲಿ ನೂರಾರು ಜನರಿಗೆ ನೆರವು ನೀಡುತ್ತಿರುವ ಹರ್ಷಿಕಾ ಕೊರೊನಾ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್​ ಮಾಡಿ ರಂಜಿಸಿದ್ದಾರೆ.

ಹೌದು. ಹರ್ಷಿಕಾ ಮತ್ತು ಭುವನ್​ ನೇರವಾಗಿ ಕೊರೊನಾ ಸೋಂಕಿತರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಹರ್ಷಿಕಾ ಹಾಗೂ ಭುವನ್​ ಮಡಿಕೇರಿ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರ್ಡ್ಗಳಿಗೆ ಭೇಟಿ ನೀಡಿದ್ದು, ಪಿಪಿಇ ಕಿಟ್​ ಧರಿಸಿ 400 ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.

ಯಾವುದೇ ಕಾರಣಕ್ಕೂ ಹೆದರಬೇಡಿ ಎಲ್ಲಾ ಒಳ್ಳೆಯದಾಗುತ್ತೆ ಎಂದು ಆತ್ಮಸ್ಥರ್ಯ ತುಂಬಿದ್ದಾರೆ. ಹರ್ಷಿಕಾ ಕೂಡ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್​ ಮಾಡಿ ಸೋಂಕಿತರನ್ನ ರಂಜಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.