ತಮ್ಮೂರಿನ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಿದ ನಟ ಮಹೇಶ್ ಬಾಬು

ಬೆಂಗಳೂರು, ಜೂನ್ 02, 2021 (www.justkannada.in): ನಟ ಮಹೇಶ್ ಬಾಬು ಹಳ್ಳಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಿದ್ದಾರೆ.

ಹೌದು, ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣರವರ ಹುಟ್ಟು ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ತಮ್ಮ ಸ್ವಂತ ಗ್ರಾಮ ಬುರೀಪಲೇಮ್‍ನ ಜನರಿಗೆ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಿದ್ದಾರೆ.

ಈ ಕುರಿತಂತೆ ಮಹೇಶ್ ಬಾಬುರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲವೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

2015ರ ಶ್ರೀಮಂತುಡು ಸಿನಿಮಾದ ವೇಳೆ ಬುರಿಪಲೇಮ್ ಗ್ರಾಮವನ್ನು ಮಹೇಶ್ ಬಾಬುರವರು ದತ್ತು ಪಡೆದಿದ್ದರು. ಸದ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮದ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸಿರುವ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಫೋಟೋ ಜೊತೆಗೆ ವ್ಯಾಕ್ಸಿನೇಷನ್‍ನಿಂದ ಮತ್ತೆ ಸಾಮಾನ್ಯ ಜೀವನ ಆರಂಭವಾಗುತ್ತದೆ ಎಂಬುವುದು ನಮ್ಮ ಭರವಸೆ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.