ಸೆ.29ರಿಂದ ಪ್ರಾರಂಭವಾಗುವ ಫಲಪುಷ್ಪ ಪ್ರದರ್ಶನಕ್ಕೂ ಜಿ.ಎಸ್.ಟಿ ಬರೆ: ಪ್ರವೇಶ ದರ ಹೆಚ್ಚಳ…

ಮೈಸೂರು,ಸೆ,26,2019(www.justkannada.in):  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆಪ್ಟಂಬರ್ 29ರಿಂದ ಆಯೋಜನೆಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೂ ಜಿ. ಎಸ್. ಟಿ ಬರೆ ಬಿದ್ದಿದ್ದು ಪ್ರವೇಶ ದರ ಹೆಚ್ಚಳ ಮಾಡಲಾಗಿದೆ.

ಮೈಸೂರಿನ ಕುಪ್ಪಣ್ಣ ಪಾರ್ಕಿನಲ್ಲಿ  ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ಅನಾವರಣಗೊಳ್ಳಲಿದ್ದು ಅಲ್ಲಿಗೆ ಆಗಮಿಸುವ ಪ್ರವಾಸಿಗರು, ಸ್ಥಳೀಯರ ಮನಸೂರೆಗೊಳಿಸಲಿದೆ. ಈ ಬಾರಿ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮ ಶತಾಬ್ದಿ ಅಂಗವಾಗಿ 27 ಅಡಿ ಎತ್ತರದ ಶ್ರೀ ಜಯಚಾಮರಾಜ ಒಡೆಯರ್  ಮಾದರಿಯನ್ನು ವಿವಿಧ ಬಣ್ಣದ ಗುಲಾಬಿ ಹೂಗಳಿಂದ ನಿರ್ಮಾಣ ಮಾಡಲಾಗಿದೆ

ತೋಟಗಾರಿಕೆ ಇಲಾಖೆ  ವತಿಯಿಂದ 40 ಸಾವಿರ ವಿವಿಧ ಜಾತಿಯ ಹೂವಿನ ಗಿಡಗಳ ಪ್ರದರ್ಶನ ಮಾಡಲಾಗುತ್ತಿದೆ. ಈ ನಡುವೆ  ಈ ಬಾರಿ ಜಿ.ಎಸ್. ಟಿ ಪರಿಗಣಿಸಿ ಏಕಾಏಕಿಯಾಗಿ ಅಧಿಕಾರಿಗಳು ಪ್ರವೇಶ ದರ ಹೆಚ್ಚಳ ಮಾಡಿದ್ದಾರೆ.  ಹೀಗಾಗಿ ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದ ಟಿಕೆಟ್ ದರ ದುಬಾರಿಯಾಗಲಿದೆ.

ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿರುವ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ. ರುದ್ರೇಶ್, ಯಸ್ಕರಿಗೆ 30 ರೂಪಾಯಿ  ಹಾಗೂ 6 ರಿಂದ 14 ವರ್ಷದೊಳಗಿನ ವಯೋಮಾನದವರಿಗೆ 15 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಈ  ಬಾರಿ  ಜಿಎಸ್ಟಿ ದರ ಅಳವಡಿಸಿದ್ದೇವೆ. ಹೀಗಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷಕ್ಕೂ  ಈ ವರ್ಷಕ್ಕೂ  ಪ್ರವೇಶ ದರದಲ್ಲಿ  ವ್ಯತ್ಯಾಸವಿದೆ. ಕಳೆದ ವರ್ಷ ಮಕ್ಕಳಿಗೆ 10 ರೂ. ಹಾಗೂ  ವಯಸ್ಕರಿಗೆ 25ರೂ ನಿಗದಿ ಮಾಡಲಾಗಿತ್ತು.

Key words: GST – flowering exhibition- Entrance rate- increase –mysore dasara-2019