ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆ ಕೊಟ್ಟಿದ್ದು ಸಂತೋಷದಾಯಕ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ಡಿಸೆಂಬರ್, 3,2020(www.justkannada.in): ಗ್ರಾಮ ಪಂಚಾಯ್ತಿ ಚುನಾವಣೆಗಾಗಿ ಬಿಜೆಪಿ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆ ಕೊಟ್ಟಿದ್ದು ಸಂತೋಷದಾಯಕ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.logo-justkannada-mysore

ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಗ್ರಾಮ ಪಂಚಾಯ್ತಿ ಚುನಾವಣೆಗಾಗಿ ಬಿಜೆಪಿ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆ ಕೊಟ್ಟಿದ್ದು ಸಂತೋಷದಾಯಕ. ಸಂಘಟನೆ ಉದ್ದೇಶದ ಈ ಸಮಾವೇಶಗಳು ಗ್ರಾಮಗಳನ್ನು ವಿಶ್ವಾಸಕ್ಕೆ ಪಡೆಯುಲು, ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಲಿ. ಈ ಮೂಲಕ ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ ಎಂದು ಹೇಳಿದ್ದಾರೆ.

ಬಿಜೆಪಿಯ ಗ್ರಾಮ ಸ್ವರಾಜ್ಯ ಎಂಬುದು ಸಂಘಟನೆ ಉದ್ದೇಶದ ಸಮಾವೇಶವಾದರೂ, ಅವುಗಳನ್ನು ಹಳ್ಳಿಗಳ ಹಂತಕ್ಕೆ ಕೊಂಡೊಯ್ಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆ ಮೂಲಕವಾದರೂ ನಮ್ಮ ಹಳ್ಳಿಗಳ ಜ್ವಲಂತ ಸಮಸ್ಯೆಗಳು ಬಿಜೆಪಿ ಸಚಿವರು, ಶಾಸಕರು ಮತ್ತು ಸರ್ಕಾರದ ಅರಿವಿಗೆ ಬರಲಿ. ಹಾಗಾದರೂ ಹಳ್ಳಿ ಜನರ ಸಮಸ್ಯೆಗಳು ಶಾಶ್ವತವಾಗಿ ನೀಗಲಿ ಎಂದು ಆಶಿಸುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.pleasure-bjp-honor-gandhiji-grama-swaraj-former-cm-hd-kumaraswamy

‘ಗ್ರಾಮ ಸ್ವರಾಜ್ಯ’ ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾದರೆ ಅದು ಸ್ವಾರ್ಥವಾಗುತ್ತದೆ. ಗ್ರಾಮಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದ್ದೇ ಆದರೆ, ಗ್ರಾಮ ಸ್ವರಾಜ್ಯದ ಹೆಸರಿಗೆ ಅರ್ಥ ಸಿಗುತ್ತದೆ. ಹಳ್ಳಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ. ಬಿಜೆಪಿ ನಾಯಕರು ಆ ಗ್ರಾಮಗಳಿಗೆ ಭೇಟಿ ನೀಡಲಿ. ಅಲ್ಲಿನ ಸಮಸ್ಯೆಗಳು, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರ ಪರದಾಟ, ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವರಿಗೆ ಪರಿಹಾರ ಒದಗಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.

Key words: pleasure – BJP – honor- Gandhiji-grama swaraj-  Former CM- HD Kumaraswamy.