ನಿರ್ದೇಶಕನ ಜತೆ ತ್ರಿಷಾ ಡೇಟಿಂಗ್: ಮದುವೆ ಕುರಿತು ಸ್ಪಷ್ಟನೆ ನೀಡಿದ ನಟಿ

ಬೆಂಗಳೂರು, ಜುಲೈ 30, 2021 (www.justkannada.in): ನಿರ್ದೇಶಕರೊಬ್ಬರ ಜತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರ ಜತೆ ಮದುವೆಯಾಗಲಿದ್ದಾರೆ ಎಂಬ ಪಿಸುಪಿಸು ಕೇಳಿ ಬಂದಿದೆ.

ಹೌದು. ಬಹುಭಾಷಾ ನಟಿ ತ್ರಿಷಾ ಮದುವೆ ಸುದ್ದಿ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದಿನಂತೆ ಈಗಲೂ ಸಹ ತ್ರಿಷಾ ಅವರ ಮದುವೆ ಸುದ್ದಿ ಹರಿದಾಡುತ್ತಿದೆ.

ನಿರ್ದೇಶಕನ ಜೊಗೆ ತ್ರಿಷಾ ಪ್ರೀತಿ-ಪ್ರೇಮ ಅಂತ ಸುತ್ತಾಡುತ್ತಿರುವ ಕಾರಣಕ್ಕೆ ಇಂಡಸ್ಟ್ರಿಯಲ್ಲೂ ಈ ವಿಷಯದ ಬಗ್ಗೆ ತುಂಬಾ ಕುತೂಹಲ ಮನೆ ಮಾಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ತ್ರಿಷಾ, ಇದೆಲ್ಲ ಕೇವಲ ಗಾಳಿ ಸುದ್ದಿ, ನಂಬಬೇಡಿ ಎಂದಿದ್ದಾರೆ. ತ್ರಿಷಾ ಅವರ ಪಿಆರ್ ತಂಡ ಸಹ ಈ ಕುರಿತಾಗಿ ಸ್ಪಷ್ಟನೆ ಕೊಟ್ಟಿದೆ.

ಈ ಹಿಂದೆ ಉದ್ಯಮಿ ವರುಣ್ ಮಣಿಯನ್ ಎಂಬುವರ ಜೊತೆ ತ್ರಿಷಾ ಅವರ ಮದುವೆ ವಿಷಯ ನಿಶ್ಚಿತಾರ್ಥದವರೆಗೂ ಹೋಗಿತ್ತು.