Sunday, September 20, 2026

BDA Apartments

Home Crime ದೀಪಾಲಂಕಾರದ ವೈಯರ್ ತಂದ ಆಪತ್ತು: ವೈಯರ್ ಗೆ ಸಿಲುಕಿ ಬೈಕ್ ನಿಂದ ಬಿದ್ದು ಸವಾರನಿಗೆ ಗಾಯ….

ದೀಪಾಲಂಕಾರದ ವೈಯರ್ ತಂದ ಆಪತ್ತು: ವೈಯರ್ ಗೆ ಸಿಲುಕಿ ಬೈಕ್ ನಿಂದ ಬಿದ್ದು ಸವಾರನಿಗೆ ಗಾಯ….

ಮೈಸೂರು,ಸೆ,26,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದೆಲ್ಲೆಡೆ ದೀಪಾಲಂಕಾರ ಮಾಡಲಾಗುತ್ತಿದ್ದು,  ಈ ಮಧ್ಯೆ ದೀಪಾಲಂಕಾರದ ವೈಯರ್ ಗೆ  ಬೈಕ್ ಸವಾರ ಸಿಲುಕಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಹುಣಸೂರು ಮುಖ್ಯರಸ್ತೆಯ ಪಡವಾರಹಳ್ಳಿ ಸರ್ಕಲ್ ಬಳಿ ಘಟನೆ‌ ನಡೆದಿದೆ. ವಿದ್ಯುತ್ ಗುತ್ತಿಗೆದಾರರ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಗರದ ಜ್ಞಾನೇಶ್ ಎಂಬುವವರಿಗೆ ಗಾಯಗಳಾಗಿದೆ. ದಸರಾ ಸಂಭ್ರಮದಲ್ಲಿ  ನಗರದೆಲ್ಲೆಡೆ ದೀಪಾಲಂಕಾರದಿಂದ ಮೈಸೂರು ನಗರ ಜಗಮಗಿಸುತ್ತದೆ. ಈ ನಡುವೆ ದೀಪಾಲಂಕಾರ ಮಾಡುವ ವೇಳೆ ಟುಪ್ಪರ್ ಗೆ ಮೇಲೆ ಕಟ್ಟಿದ್ದ ವಯರ್  ನೆಲಕ್ಕೆ ಬಿದ್ದಿದೆ. ಈ ವೇಳೆ ಬೈಕ್ ಸವಾರ ಜ್ಞಾನೇಶ್  ವೈಯರ್ ಗೆ ಸಿಲುಕಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಜ್ಞಾನೇಶ್ ಅವರ ಕಾಲು ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಎತ್ತರಕ್ಕೆ ವೈಯರ್ ಕಟ್ಟದೆ ವೈರ್ ನೇತಾಡುತ್ತಿದ್ದುದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

Key words:  Mysore dasara- Light Wire- fell – bike rider-injured