Friday, September 18, 2026

BDA Apartments

ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ: ಮುಖ್ಯಮಂತ್ರಿ DKS ಘೋಷಣೆ BDA JK_Adv BDA Adv
Home Cinema ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ: ಮುಖ್ಯಮಂತ್ರಿ DKS ಘೋಷಣೆ

ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ: ಮುಖ್ಯಮಂತ್ರಿ DKS ಘೋಷಣೆ

  • ಅಷ್ಟರೊಳಗೆ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿದ್ದವಿರಬೇಕು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ
  • ಸಿಆರ್‌ಝಡ್‌ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ ೧೫-೨೦ ದಿನಗಳಲ್ಲಿ ವರದಿ ಸಿದ್ದಪಡಿಸಿ: ಸಮಸ್ಯೆಗಳು  ಮತ್ತು ಪರಿಹಾರಗಳನ್ನು ಸಿದ್ದಪಡಿಸಿ: ಅಧಿಕಾರಿಗಳಿಗೆ ಸಿಎಂ ತಾಕೀತು
  • ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು: ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು: ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ”

BANGALORE, JUNE.19,2026: ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ  ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಸೂಚನೆ.

ಸದ್ಯ ಅನುಮೋದಿಸಿರುವ ೪೫ ಯೋಜನೆಗಳಿಂದ ೪೫೦೦ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು

ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ  ಪರಿಗಣಿಸಲು ಸೂಚನೆ

ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ mangalore university

ಕಲೆಗೆ ಪ್ರಾಶಸ್ತ್ಯ ಹೆಚ್ಚಿಸಬೇಕು: ಕರಾವಳಿಯ ಜನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಬೇಕು: ರಿಷಬ್‌ ಶೆಟ್ಟಿ

ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದರಿಂದ ಕೇರಳ-ಗೋವಾ-ಕರ್ನಾಟಕದ ಸಿನಿಮಾ ಜಗತ್ತಿಗೆ ಹೆಚ್ಚು ಅನುಕೂಲ: ರಿಷಬ್‌ ಶೆಟ್ಟಿ

ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ ಜಾರಿಗೆ ಸಿಎಂ ಒಲವು

ಹೆಲಿ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಲು ಸಿಎಂಗೆ ಉದ್ಯಮಿಗಳ ಮನವಿ

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಸಭೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು:

*ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ ೭೧೮.೬೩ ಕೋಟಿ ರೂಪಾಯಿ ಅಂದಾಜು ಹೂಡಿಕೆಯ ೪೫ ಯೋಜನೆಗಳನ್ನು ಅನುಮೋದಿಸಲಾಗಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

*ವಿಶೇಷ ಕ್ಷೇತ್ರವಾಗಿ ಕರಾವಳಿ ಪ್ರವಾಸೋದ್ಯಮ. *

*ಪ್ರವಾಸೋದ್ಯಮ ವಲಯಗಳು  ಮತ್ತು ಬೃಹತ್‌ ಪ್ರವಾಸೋದ್ಯಮ ಯೋಜನೆಗಳು

*ಕರಾವಳಿ ಮೇಳಗಳು, ಉತ್ಸವವಗಳು ಮತ್ತು ಮಾರ್ಕೆಟಿಂಗ್‌

ಮುಖ್ಯಮಂತ್ರಿ DKS ಘೋಷಣೆ dks dks 4

ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡುವುದು.

ಸರ್ಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಒತ್ತು ನೀಡಿದರು.

Key words: Karnatak, d.k.shivakumar, Mangalore, karavali, Rishab Shetty

ಕರಾವವಳಿಯಲ್ಲಿ ಕ್ಯಾಬೆನೆಟ್‌ ನಡೆಸುತ್ತೇವೆ: ಮುಖ್ಯಮಂತ್ರಿ DKS ಘೋಷಣೆ jk02_new jk02 new