Sunday, September 20, 2026

BDA Apartments

Home Front Page  ಸಿಗದ ಸಚಿವ ಸ್ಥಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ- ಯಶವಂತರಾಯಗೌಡ ಪಾಟೀಲ್

 ಸಿಗದ ಸಚಿವ ಸ್ಥಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ- ಯಶವಂತರಾಯಗೌಡ ಪಾಟೀಲ್

ಬೆಂಗಳೂರು,ಆಗಸ್ಟ್,3,2026 (www.justkannada.in):  ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್  ತಿಳಿಸಿದ್ದಾರೆ.

ನೂತನ ಸಚಿವ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಬಂಡಾಯ ಭುಗಿಲೆದ್ದಿದ್ದು ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾತನಾಡಿದ ಶಾಸಕ ಯಶವಂತರಾಯಗೌಡ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ.   ನಿಷ್ಟಾವಂತರು ಪ್ರಾಮಾಣಿಕರಿಗೆ ಕಾಲವಲ್ಲ.  ನಿಷ್ಟಾವಂತರು ಪ್ರಾಮಾಣಿಕರನ್ನು ಗುರುತಿಸದಿದ್ದಕ್ಕೆ ಬೇಸರವಾಗಿದೆ. ಈ ಬಾರಿ ಸಚಿವ ಸ್ಥಾನ ನಿರೀಕ್ಷೆ ಇಟ್ಟುಕೊಂಡಿದ್ದೆ.  ಪಕ್ಷದ ವರಿಷ್ಠರು ಕೂಡ ಸಚಿವಸ್ಥಾನದ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ನನಗೆ ಸಚಿವ ಸ್ಥಾನ ಕೈತಪ್ಪಿದೆ.

ಕೊಟ್ಟ ಮಾತು ಉಳಿಸಿಕೊಳ್ಳದಿದ್ದಕ್ಕೆ ಬೇಸರವಾಗಿದೆ. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸ್ಪೀಕರ್ ಭೇಟಿಗೆ ಸಮಯ ಕೇಳಿದ್ದೇನೆ. ಕಾರ್ಯಕರ್ತರು ಬೆಂಬಲಿಗರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.ಸಿಗದ ಸಚಿವ ಸ್ಥಾನ jk02_new jk02 new

Key words: Cabinet expansion. Resign, MLA – Yashwant Ray Gowda Patil